Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕಾರ್ಕಳ: ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲರ್ ಪಲ್ಟಿ – ಓರ್ವ ಸಾವು

ಕಾರ್ಕಳ: ಮೇ 09: ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿದ್ದು, ಯುವಕನೋರ್ವ ಮೃತ ಪಟ್ಟ ಘಟನೆ ಕುದುರೆಮುಖ-ಮಾಳ ಹೆದ್ದಾರಿ ನಡುವೆ ಘಾಟಿ ರಸ್ತೆಯ ಎಸ್ ಕೆ ಬಾರ್ಡರ್ ಹಾಗೂ ಚೆಕ್ ಪೋಸ್ಟ್ ಬಳಿ ಮೇ.8 ಸಂಜೆ ನಡೆದಿದೆ.

ಮೃತರನ್ನು ಹೇಮಂತ್ (23) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಪಲ್ಲವಿ ಹುಣಸಿಕಟ್ಟೆ, ಅಖಿಲಾಶ್ರೀ ಲೋಳೇಕರ, ಶ್ರೇಯಾ, ಬಿಂದು ಎಂದು ಗುರುತಿಸಲಾಗಿದೆ.

ಪ್ರವಾಸ ನಿಮಿತ್ತ ಹೊರನಾಡು ಕಡೆಯಿಂದ ಕಾರ್ಕಳ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಕಾರಣ ದುರ್ಘಟನೆ ಸಂಭವಿಸಿದೆ‌. ಹಲವರಿಗೆ ಗಾಯಗಳಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

No Comments

Leave A Comment