Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಭಾರಿ ಮಳೆ: ಉದ್ಘಾಟನೆಯಾದ 2 ತಿಂಗಳಿಗೇ ಕುಸಿದು ಬಿತ್ತು ‘ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ’ ಗ್ಯಾಲರಿ

ಬೆಂಗಳೂರು: ಉದ್ಘಾಟನೆಯಾದ 2 ತಿಂಗಳಲ್ಲಿಯೇ  ‘ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ’ದ ಗ್ಯಾಲರಿ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನ ಹೆಎಚ್ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆ ಗಾಳಿಗೆ ಹೆಎಚ್ಎಸ್ ಆರ್ ಲೇಔಟ್ ನ ‘ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ’ದ ಗ್ಯಾಲರಿ ಕುಸಿದು ಬಿದ್ದಿದೆ. ಈ ಕ್ರೀಡಾಂಗಣವನ್ನು ಕಳೆದ ಮಾರ್ಚ್ 1ರಂದು ಸಿ.ಎಂ. ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು.

ಕ್ರೀಡಾಂಗಣದ ಒಂದು ಗ್ಯಾಲರಿ ಮೇಲೆ ಮರ ಬಿದ್ದಿದ್ದು, ಮತ್ತೊಂದು ಗ್ಯಾಲರಿ ಸೀದಾ ಧರೆಗುರುಳಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು.

ಬಿಬಿಎಂಪಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣದ ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಮೇಲೂ ಕಬ್ಬಿಣದ ಸರಳುಗಳು ಬಿದ್ದಿದ್ದು, ಹೊಸದಾಗಿ ಹಾಕಲಾಗಿದ್ದ ಗ್ರಾನೇಟ್ ಗಳು ಕಿತ್ತು ಹೋಗಿವೆ.

No Comments

Leave A Comment