ಸುದರ್ಶನ್ ಜಿ ಶೇಖರ್ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರ ಮೆಟಡೋರ್ ನ ಪ್ರಮೋಷನ್ ಸಾಂಗ್ ನಲ್ಲಿ ನಟಿ ಕವಿತಾ ಗೌಡ ಅವರು ಕಾಣಿಸಿಕೊಂಡಿದ್ದಾರೆ.
ಸುದರ್ಶನ್ ಅವರು ಈಗಾಗಲೇ 13 ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಇದೇ ಮೊದಲ ಬಾರಿಗೆ ಮೆಟಡೋರ್ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಐದು ಕಥೆಗಳನ್ನು ಹೇಳುವ ಹೈಪರ್‌ಲಿಂಕ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಕಿರಣ್, ರವಿ ಮೈಸೂರು, ರಾಜ ಕಾಮ ವರ್ಮ ಮತ್ತು ಅರ್ಚನಾ ಮಹೇಶ್ ಹೊಸ ಪ್ರತಿಭೆಗಳು ನಟಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬೀದಿ ನಾಟಕದ ಮೂಲಕ ಚಿತ್ರದ ಟ್ರೇಲರ್ ನ್ನು ಚಿತ್ರತಂಡ ವಿಭಿನ್ನವಾಗಿ ಬಿಡುಗಡೆ ಮಾಡಿತ್ತು. ಇದೀಗ ಚಿತ್ರತಂಡವು ಚಿತ್ರಕ್ಕೆ ಪ್ರಮೋಷನ್ ಸಾಂಗ್’ನ್ನು ಸಿದ್ಧಪಡಿಸಿದ್ದು, ಈ ಹಾಡಿನಲ್ಲಿ ಕವಿತಾಗೌಡ ಅವರು ಕಾಣಿಸಿಕೊಂಡಿದ್ದಾರೆ.
ಗಾಂಧಾರಿ ಎಂಬ ಶೀರ್ಷಿಕೆಯ ಈ ಹಾಡನ್ನು ಪನೀಶ್ ರಾಜಾ ಅವರು ರಚಿಸಿದ್ದಾರೆ. ಗೀತೆಯನ್ನು ಅಪೂರ್ವ ಶ್ರೀಧರ್ ಹಾಡಿದ್ದಾರೆ.
ಜೀವನ ಮತ್ತು ಕರ್ಮದ ಕುರಿತ ಚಿತ್ರ ಮೆಟಡೋರ್ ಆಗಿದ್ದು, ಕಿರಣ್ ಕುಮಾರ್ ನಿರ್ಮಾಣದ ಈ ಚಿತ್ರ ಮೇ.27 ರಂಡು ಬಿಡುಗಡೆಯಾಗಲಿದೆ.