Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಒತ್ತುವರಿ ವಿರುದ್ಧ ಕಾರ್ಯಚರಣೆ: ಬುಲ್ಡೇಜರ್ ಜೊತೆ ಶಾಹೀನ್ ಭಾಗ್ ಗೆ ತೆರಳಿದ ಪೊಲೀಸರಿಗೆ ಪ್ರತಿಭಟನೆ ಬಿಸಿ

ನವದೆಹಲಿ: ಶಾಹೀನ್ ಭಾಗ್ ನಲ್ಲಿ ಸೋಮವಾರ ಒತ್ತುವರಿ ತೆರವು ಕಾರ್ಯಚರಣೆ ವಿರುದ್ಧ ಪ್ರತಿಭಟನೆ ಭುಗಿಲೆದಿತ್ತು. ಬುಲ್ದೇಜರ್ ನೊಂದಿಗೆ ಎಸ್ ಡಿಎಂಸಿ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಮಹಿಳೆಯರು ಸೇರಿದಂತೆ ನೂರಾರು ಮಂದಿ ಧರಣಿ ಆರಂಭಿಸಿದರು.

ಬಿಜೆಪಿ ಆಡಳಿತ ನಡೆಸುತ್ತಿರುವ ದಕ್ಷಿಣ ದೆಹಲಿ ಮುನ್ಸಿಪಲ್  ಕಾರ್ಪೋರೇಷನ್ ಮತ್ತು ಕೇಂದ್ರ ಸರ್ಕಾರದ  ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ, ಒತ್ತುವರಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಡಿಸೆಂಬರ್ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಶಾಹೀನ್ ಭಾಗ್ ಪ್ರತಿಭಟನೆಯ ಕೇಂದ್ರವಾಗಿತ್ತು. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಮಾರ್ಚ್ 2020 ರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.

ಅಕ್ರಮ ಒತ್ತುವರಿ ತೆರವುಗೊಳಿಸಲು ಶಾಹೀನ್ ಭಾಗ್ ಬುಲ್ಡೇಜರ್,ಟ್ರಕ್ ಮತ್ತು ಪೊಲೀಸರೊಂದಿಗೆ ನಮ್ಮ ತಂಡ ಶಾಹೀನ್ ಭಾಗ್ ತೆರಳಿದೆ. ಒತ್ತುವರಿ ತೆರವು ನಮ್ಮ ಕಡ್ಡಾಯ ಕರ್ತವ್ಯವಾಗಿದೆ ಎಂದು ಎಸ್ ಡಿಎಂಸಿ ಕೇಂದ್ರ ವಲಯದ ಮುಖ್ಯಸ್ಥ ರಾಜ್ ಪಾಲ್ ಸಿಂಗ್ ತಿಳಿಸಿದ್ದಾರೆ.

ಶಾಹೀನ್ ಭಾಗ್ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಚರಣೆಗಾಗಿ ಎಸ್ ಡಿಎಂಸಿ ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಪೊಲೀಸರೊಂದಿಗೆ ಹಿರಿಯ ಅಧಿಕಾರಿಗಳು ಕೂಡಾ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.

No Comments

Leave A Comment