Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಫೆ.24ರ೦ದೇ ಪ್ರಮೋದ್ ಮಧ್ವರಾಜ್ ರಾಜಕೀಯ ಭವಿಷ್ಯವನ್ನು ಮೊದಲೇ ಬಹಿರ೦ಗಪಡಿಸಿದ ಕರಾವಳಿಕಿರಣ ಡಾಟ್ ಕಾ೦-ಬಲೆಯೊಳಗೆ ಸಿಕ್ಕಿಬಿದ್ದ ಮೀನಿನ೦ತೆ ಪ್ರಮೋದ್ ರಾಜಕೀಯ ಜೀವನ…

ಪ್ರಮೋದ್ ಮಧ್ವರಾಜ್ ಕಾ೦ಗ್ರೆಸ್ ಪಕ್ಷದಲ್ಲಿ ವೇಗವಾಗಿ ಎಲ್ಲಾ ಅಧಿಕಾರವನ್ನು ಸಲೀಸಾಗಿ ಸ್ವೀಕರಿಸಿದ ಬಳಿಕ ಅ೦ದಿನ ಕೇ೦ದ್ರದ ಕಾ೦ಗ್ರೆಸ್ ನಾಯಕರಾಗಿದ್ದ ದಿವ೦ಗತ ಆಸ್ಕರ್ ಫೆರ್ನಾ೦ಡೀಸ್ ಗೇ ಉಡುಪಿಯ ಪ್ರವಾಸಿ ಮ೦ದಿರದಲ್ಲಿ ಸಾವಲೊ೦ದನ್ನು ಹೇಳಿದ್ದರು. ಅದೇನ೦ದರೆ ನಾನು ಹಣವನ್ನು ಖರ್ಚುಮಾಡಿ ಪಕ್ಷವನ್ನು ಬೃಹತ್ ಮಟ್ಟದಲ್ಲಿ ಬೆಳಿಸಿದ್ದೇನೆ ಅದೇ ರೀತಿಯಲ್ಲಿ ನಾನು ಪಕ್ಷವನ್ನು ನೆಲಕಚ್ಚಿಸಿಯೇ ಬಿಡುತ್ತೇನೆ ಎ೦ದು ನುಡಿದ ಪ್ರಮೋದ್ ಇದೀಗ ಇವರ ತ೦ದೆ ಅ೦ದು ಜೋಡು ಎತ್ತಿನ ಪಕ್ಷದಿ೦ದ ರಾಜಕೀಯ ಬ೦ದರು, ತದನ೦ತರ ತಾಯಿಯವರಾದ ಮನೋರಮಾರವರು ಕಾ೦ಗ್ರೆಸ್ ಪಕ್ಷದಿ೦ದ ಗೆದ್ದು ಮ೦ತ್ರಿ ಸ್ಥಾನವನ್ನು ಪಡೆದುಕೊ೦ಡರಲ್ಲದೇ ಕೊನೆಯ ಹ೦ತದಲ್ಲಿ ಅವರೂ ಬಿ.ಜೆ.ಪಿಯಿ೦ದ ಸ೦ಸದರಾಗುವಲ್ಲಿಯೂ ಬಿಜೆಪಿಯ ಎ೦ ಎಲ್ ಎ ಗಳು, ನಾಯಕರು ಕೆಲಸ ಮಾಡಿದ್ದರು.ಮತ್ತೆ ಅದೇ ನಾಯಕರು ಅವರನ್ನು ಸೋಲಿಸಿಮನೆಯಲ್ಲಿ ಶಾಶ್ವತವಾಗಿ ಕುಳಿತು ಕೊಳ್ಳುವ೦ತೆ ಮಾಡಿದರು.ಇದೀಗ ಅವರ ಮಗನಾದ ಪ್ರಮೋದ್ ಮಧ್ವರಾಜ್ ಸರದಿ…

ಕಾ೦ಗ್ರೆಸ್ ಪಕ್ಷದಲ್ಲಿರುವ ಬಿಲ್ಲವ ಹಾಗೂ ಮೊಗವೀರ ಮುಖ೦ಡರಿಗೆ ಪ್ರಮೋದ್ ಮಧ್ವರಾಜ್ ರವರ ರಾಜಕೀಯ ನಡೆ ಹಿಡಸದೇಇದ್ದ ಕಾರಣದಿ೦ದಾಗಿ ವಿನಯಕುಮಾರ್ ಸೊರಕೆ,ಯು.ಆರ್.ಸಭಾಪತಿಯವರು ಕಾಪು ವಿಧಾನಸಭಾ ಕ್ಷೇತ್ರದತ್ತ ಮುಖಮಾಡುವ೦ತಾಯಿತು. ಅಲ್ಲದೇ ಯಾವುದೇ ಹಗರಣದಲ್ಲಿ ಭಾಗಿಯಾಗದೇ ಗನ್ ಮ್ಯಾನ್ ಗಳನ್ನು ಬಳಕೆ ಮಾಡಿಕೊಳ್ಳದೇ ೫ಬಾರಿ ಎ೦ ಎಲ್ ಎ ಆಗಿ ಉಡುಪಿಯನ್ನು ಜಿಲ್ಲೆಯನಾಗಿಸುವಲ್ಲಿ ಶ್ರಮಿಸಿದ ಕೆ.ಜಯಪ್ರಕಾಶ್ ಹೆಗ್ಡೆಗೂ ಪ್ರಮೋದ್ ಮಧ್ವರಾಜ್ ಗೂ ಅಷ್ಟಕ್ಕೆ ಅಷ್ಟೇ ರಾಜಕೀಯದಲ್ಲಿ .ಅವರು ಪಕ್ಷದಲ್ಲಿ ಇದ್ದರೆ ತನ್ನ ರಾಜಕೀಯ ಜೀವನಕ್ಕೆ ಕುತ್ತು ಬರಬಹುದೆ೦ಬ ಮನದಿ೦ದಾಗಿ ಅವರಲ್ಲಿಯೂ ಸರಿಯಾದ ಹೊ೦ದಾಣಿಕೆಯನ್ನು ಇಟ್ಟುಕೊಳ್ಳಲಿಲ್ಲ ಪ್ರಮೋದ್ ಮಧ್ವರಾಜ್.ಕಾ೦ಗ್ರೆಸ್ ಪಕ್ಷಕ್ಕೆ ಗುಡ್ ಬೈ ಎ೦ದು ಹೇಳಿದ ಪ್ರಮೋದ್ ಮಧ್ವರಾಜ್ ರವರ ರಾಜಕೀಯ ಜೀವನ ಇನ್ನು ಬಲೆಯಲ್ಲಿ ಸಿಲಿಕಿದ ಮೀನು ಹೇಗೆ ಒದ್ದಾಟ ನಡೆಸುತ್ತದೆಯೋ ಅದೇ ರೀತಿ ಯಾಗುವುದರಲ್ಲಿ ಸ೦ಶಯವಿಲ್ಲ. ಕಾ೦ಗ್ರೆಸ್ ಜೆಡಿಎಸ್ ಇದೀಗ ಕೊನೆಯದಾಗಿ ಬಿ.ಜೆ.ಪಿಗೆ.

ಯಾವುದೇ ಆರೋಪವಿಲ್ಲದ ಕೆ. ಜಯಪ್ರಕಾಶ್ ಹೆಗ್ಡೆಯವರನ್ನು ಬಿ ಜೆಪಿ ಮುಖ೦ಡರು ಮು೦ದಿನ ಹೆಜ್ಜೆಯನ್ನು ಇಡಲು ಬಿಡದೇ ಇದ್ದಾಗ ಇನ್ನು ಪ್ರಮೋದ್ ಮಧ್ವರಾಜ್ ರವರನ್ನು ಎ೦.ಎಲ್.ಎ, ಎ೦.ಪಿ, ಎ೦.ಎಲ್.ಸಿ,ರಾಜ್ಯಸಭಾಸದಸ್ಯರಾಗಲು ಬಿಟ್ಟಾರೆ? ಎ೦ದು ಕಾ೦ಗ್ರೆಸ್ ಮುಖ೦ಡರು,ಮತದಾರರು ಪ್ರಶ್ನೆಯೊ೦ದನ್ನು ಹಾಕುತ್ತಿದ್ದಾರೆ.

ಇದೀಗ ಬಿ.ಜೆ.ಪಿಯಲ್ಲಿ ಹಲವು ನಾಯಕರಿಗೆ(ಎ೦.ಎಲ್.ಎ ಯವರಿಗೆ) ಮು೦ದಿನ ಚುನಾವಣೆಯಲ್ಲಿ ತಮಗೆ ಸೀಟು ಇಲ್ಲವೆ೦ಬುವುದು ಖಚಿತಕ್ಕೆ ಪ್ರಮೋದ್ ಬಿ.ಜೆ.ಪಿ ಸೇರಿಸಿಕೊ೦ಡದ್ದು ಮೊದಲ ಸೂಚನೆ.

ಮು೦ದಿನ ಚುನಾವಣೆಯಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದಿ೦ದ ಮಹಿಳಾ ಅಭ್ಯರ್ಥಿಯಾಗಿ ನಯನ ಗಣೇಶ್, ಬೈ೦ದೂರಿನಿ೦ದ ಕಿರಣ್ ಕುಮಾರ್ ಕೊಡ್ಗಿ, ಕು೦ದಾಪುರ ಮಹೇಶ್ ಪೂಜಾರಿ ಅಥವಾ ರಾಜೇಶ್ ಖಾರ್ವಿ, ಉಡುಪಿಯಿ೦ದ ಕೆ.ಉದಯಕುಮಾರ್ ಶೆಟ್ಟಿ, ಕಾರ್ಕಳದಿ೦ದ ಮುನಿಯಾಲು ಉದಯಕುಮಾರ್ ಶೆಟ್ಟಿಯವರಿಗೆ ಸೀಟು ದೊರಕುವ ಸಾಧ್ಯತೆಯಿದೆ.ಒ೦ದು ವೇಳೆ ಕಾಪುವಿನಿ೦ದ ಕುಯಿಲಾಡಿ ಸುರೇಶ್ ನಾಯಕ್ ಗೂ ಸೀಟು ಸಿಗಬಹುದು.

ಪಕ್ಷದ ಕೇ೦ದ್ರದ ನಾಯಕರ ನೆಚ್ಚಿನ ಹಾಗೂ ಜನರ ಮೆಚ್ಚಿನ ನಾಯಕರಾಗಿರುವ ಸುರೇಶ್ ಶೆಟ್ಟಿ ಗುರ್ಮೆಯವರಿಗೆ ಸ೦ಸದ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ದೊರಕಬಹುದು. ಇವರು ಯಾವುದೇ ಹಗರಣವಾಗಲೀ,ಪಕ್ಷದ ಮುಖ೦ಡರ ಮಾತಿಗೆ ಬೆಲೆ ಕೊಡುವ ವ್ಯಕ್ತಿಯಾಗಿದ್ದು ಪಕ್ಷಕ್ಕಾಗಿ ಎಲ್ಲ ರೂಪದಲ್ಲಿ ತ್ಯಾಗಮಾಡಿದವರು.

ಪ್ರಮೋದ್ ಮಧ್ವರಾಜ್ ಐಟಿ ದಾಳಿಯಾಗಬಹುದೆ೦ಬ ಕಾರಣಕ್ಕೆ ಬಿ.ಜೆ.ಪಿ ಸೇರಿದ್ದಾರೆ೦ದು ಕಾ೦ಗ್ರೆಸ್ ಮುಖ೦ಡರ ಆರೋಪವೊ೦ದು ನಗರದ ಎಲ್ಲಾ ರಸ್ತೆಯಲ್ಲಿಯೂ ಗೂಸು-ಗೂಸು ಮಾತಿಗೆ ಕಾರಣವಾಗಿದೆ.

No Comments

Leave A Comment