Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಪಣಿಯಾಡಿ:ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವರಿಗೆ ವಿಜೃ೦ಭಣೆಯ “ಬ್ರಹ್ಮಕಲಶೋತ್ಸವ” ಸ೦ಪನ್ನ-ಕೇ೦ದ್ರಸಚಿವೆ ಶೋಭಾ,ರಾಜ್ಯಸಚಿವ ಕೋಟಾ ಭೇಟಿ(105pic)

 ದೇವ ಪ್ರೇಮ ದೇಶ ಪ್ರೇಮವನ್ನು ಬೆಳೆಸಿಕೊಳ್ಳೋಣ-ಪುತ್ತಿಗೆ ಶ್ರೀಪಾದರು

ನಮ್ಮನ್ನು ಸದಾ ಸಂರಕ್ಷಿಸುವ ದೇವನ ಬಗ್ಗೆ ಸರಿಯಾದ ಅರಿವು ನಮಗಿರಬೇಕು. ಅವನು ಇಡೀ ವಿಶ್ವದ ಕಣ ಕಣಗಳಲ್ಲಿ ನೆಲೆಸಿದ್ದಾನೆ. ಅವನು ನಿರ್ಮಿಸಿದ ಈ ವಿಶ್ವವೂ ಪರಮ ಪಾವನವಾದದ್ದು. ಇಲ್ಲಿರುವ ಪ್ರಾಚೀನ ನದೀ ಸರೋವರ ಮಂದಿರಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಇವೆಲ್ಲದರ ಜೀರ್ಣೋದ್ಧಾರ ಕಾರ್ಯಗಳಿಂದ ಅಶ್ವಮೇಧ ಮೊದಲಾದ ಯಾಗದ ಮಹಾ ಫಲವು ದೊರೆಯುತ್ತದೆ ಎಂದು ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ತಿಳಿಸಿದರು.

ಉಡುಪಿಯ ಇತಿಹಾಸ ಪ್ರಸಿದ್ಧವಾದ ಮತ್ತು ಮಧ್ವವಿಜಯ ಮಹಾಕಾವ್ಯದಲ್ಲಿ ಉಲ್ಲೇಖಗೋಂಡ ಹಾಗೂ ಶ್ರೀ ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟಿರುವ ಶ್ರೀಪಣಿಯಾಡಿಯ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಸಂಕಲ್ಪಿಸಿದ್ದ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀಪಾದರು ಸಹಸ್ರ ಕಲಶಾಭಿಷೇಕವನ್ನು ಇಂದು ಬೆಳಿಗ್ಗೆ ಮಿಥುನ ಲಗ್ನದಲ್ಲಿ ವೈದಿಕ ವೃಂದದವರೊಂದಿಗೆ ನೆರವೇರಿಸಿದರು .

ಈ ಸಂದರ್ಭದಲ್ಲಿ “ದೇವಪ್ರೇಮ ದೇಶಪ್ರೇಮ ದೇಹಪ್ರೇಮ” ಎಂಬ ಕಿರು ಹೊತ್ತಿಗೆಯನ್ನು ಲೋಕಾರ್ಪಣೆ ಮಾಡಲಾಯಿತು.

ಬಹು ವೈಭವದಿಂದ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ತಂತ್ರಿಗಳಾದ ವೇ.ಮೂ. ಹಯವದನ ತಂತ್ರಿಗಳ ನೇತೃತ್ವದಲ್ಲಿ ನಡೆದವು.

.

 

ಈ ಸಂದರ್ಭದಲ್ಲಿ ವಿದ್ವಾನ್ ವಾದಿರಾಜ ತಂತ್ರಿಗಳು, ವಿದ್ವಾನ್ ಪಂಜ ಭಾಸ್ಕರ ಭಟ್, ವಿದ್ವಾನ್ ಗೋಪಾಲಕೃಷ್ಣ ಜೋಯಿಸ್, ವಿದ್ವಾನ್ ಅವಧಾನಿ ಸುಬ್ರಹ್ಮಣ್ಯ ಭಟ್, ಅರ್ಚಕ ಕೆ.ರಾಘವೇಂದ್ರ ಭಟ್, ಬಿದರಹಳ್ಳಿ ರಘೂತ್ತಮಾಚಾರ್, ವಿದ್ವಾನ್ ಮಧ್ವರಮಣಾಚಾರ್ ಸ೦ಚಾಲಕರಾದ ಎ೦. ನಾಗರಾಜ್ ಆಚಾರ್ಯ , ಪಸನ್ನ ಆಚಾರ್ಯ, ರತೀಶ್ ತ೦ತ್ರಿ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್, ಎಸ್ ನಾರಾಯಣ ಮಡಿ,ಪ್ರಧಾನ ಕಾರ್ಯದರ್ಶಿಗಳಾದ ಬಿ. ವಿಜಯರಾಘವ ರಾವ್, ಉಪಾಧ್ಯಕ್ಷರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ , ವಿಷ್ಣುಮೂರ್ತಿ ಉಪಾಧ್ಯಾಯ , ವಿಠ್ಠಲ್ ಮೂರ್ತಿ ಆಚಾರ್ಯ, ಶ್ರೀಮತಿ ಭಾರತಿಕೃಷ್ಣಮೂರ್ತಿ,ಶ್ರೀಮತಿ ಸುಮಿತ್ರ ಕೆರೆಮಠ, ಶ್ರೀಧರ ಭಟ್ ಪಣಿಯಾಡಿ,ರಾಜೇಶ್ ಪಣಿಯಾಡಿ, ಕೃಷ್ಣಮೂರ್ತಿ ಭಟ್ ನಾಗರಾಜ್ ಪಣಿಯಾಡಿ, ಅರುಣ್ ಪಣಿಯಾಡಿ ಹಾಗೂ ಇತರರು
ಹಾಗೂ ಊರ ಪರ ಊರಿನ ಅಸಂಖ್ಯ ಭಕ್ತರು ಜೀರ್ಣೋದ್ಧಾರ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಧ್ಯಾಹ್ನ ಪಲ್ಲ ಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ಜರಗಿತು.

ಪರಮಪೂಜ್ಯ ಶ್ರೀಪಾದರ ಷಷ್ಟಬ್ಧಿ ಪ್ರಯುಕ್ತ ಈ ಪ್ರಾಚೀನ ದೇವಾಲಯವನ್ನು ಅತ್ಯಂತ ಭವ್ಯವಾಗಿ ಜೀರ್ಣೋದ್ಧಾರ ಮಾಡಲಾಗಿ ಸಮರ್ಪಿಸಲಾಗಿದೆ .

No Comments

Leave A Comment