Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಪಣಿಯಾಡಿ: ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕ-ಸಾ೦ಸ್ಕೃತಿ ಕಾರ್ಯಕ್ರಮ ಉದ್ಘಾಟನೆ-ಇ೦ದು ಆಚಾರ್ಯಾದಿ ಋತ್ವಿಜರ ಸ್ವಾಗತ,ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣಮುಹೂರ್ತ(145pic)

 

ಪಣಿಯಾಡಿ: ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತವಾಗಿ ಸೋಮವಾರದ೦ದು ಧಾರ್ಮಿಕ-ಸಾ೦ಸ್ಕೃತಿ ಕಾರ್ಯಕ್ರಮ ಉದ್ಘಾಟನೆಯನ್ನು ಸುಬ್ರಮಣ್ಯ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರು ದೀಪ ಪ್ರಜ್ವಲಿಸುವುದರ ಮುಖಾ೦ತರ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭಹಾರೈಸಿದರು.

ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ವಹಿಸಿದ್ದರು.

ಸಮಾರ೦ಭದಲ್ಲಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರನಾಯಕ್. ಡಾ.ತಲ್ಲೂರು ಶಿವರಾಮ ಶೆಟ್ಟಿ, ಜಯಕರ ಶೆಟ್ಟಿ ಇ೦ದ್ರಾಳಿ,ಕಿಶೋರ್ ಕುಮಾರ್,ನಗರಸಭೆಯ ಸದಸ್ಯ ಗಿರೀಶ್ ಅ೦ಚನ್,ವೇದ ಮೂರ್ತಿ ಹಯವದನ ತ೦ತ್ರಿ, ವೇದ ಮೂರ್ತಿ ವೇದವಾಸ್ಯ ಐತಾಳ್,ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್ಮೊದಲಾದವರು ಸಭಾವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎಸ್ ನಾರಾಯಣ ಮಡಿ ಸ್ವಾಗತಿಸಿದರು,ಡಾ.ಬಿ ಗೋಪಾಲಾಚಾರ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾರ೦ಭದಲ್ಲಿ ಸ೦ಚಾಲಕರಾದ ಎ೦. ನಾಗರಾಜ್ ಆಚಾರ್ಯ , ಪುತ್ತಿಗೆ ಮಠದ ಮುರಳೀಧರ ಆಚಾರ್ಯ,ಪ್ರಸನ್ನ ಆಚಾರ್ಯ,
ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿಜಯರಾಘವ ರಾವ್, ಉಪಾಧ್ಯಕ್ಷರಾದ ,ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ , ವಿಷ್ಣುಮೂರ್ತಿ ಉಪಾಧ್ಯಾಯ , ವಿಠ್ಠಲ್ ಮೂರ್ತಿ ಆಚಾರ್ಯ, ಶ್ರೀಮತಿ ಭಾರತಿಕೃಷ್ಣಮೂರ್ತಿ,ಶ್ರೀಮತಿ ಸುಮಿತ್ರ ಕೆರೆಮಠ, ಶ್ರೀಧರ ಭಟ್ ಪಣಿಯಾಡಿ, ರಾಜೇಶ್ ಪಣಿಯಾಡಿ, ಕೃಷ್ಣಮೂರ್ತಿ ಭಟ್ ನಾಗರಾಜ್ ಪಣಿಯಾಡಿ ಉಪಸ್ಥಿತರಿದ್ದರು.ನ೦ತರ ವಿವಿಧ ನೃತ್ಯಕಾರ್ಯಕ್ರಮ ಯಕ್ಷಗಾನ ಕಾರ್ಯಕ್ರಮವು ಜರಗಿತು.

ಇ೦ದು 03-05-2022ನೇ ಬೆಳಿಗ್ಗೆ 9-00ರಿಂದ ಆಚಾರ್ಯಾದಿ ಋತ್ವಿಜರ ಸ್ವಾಗತ ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣಮುಹೂರ್ತ, ಪಂಚಗವ್ಯ ಪುಣ್ಯಾಹವಾಚನ, ದೇವನಾಂದಿ, ಆಚಾರ್ಯಾದಿ ಋಗ್ಗರಣ, ಅರಣಮಥನ, ಆದ್ಯ ಗಣಯಾಗ ಕಾರ್ಯಕ್ರಮವು ಜರಗಿತು.

 

 

No Comments

Leave A Comment