ಉಡುಪಿ:ಏ ,29: ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಓರ್ವರು ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದ ಅಘಾತಕಾರಿ ಘಟನೆ ಆದಿ ಉಡುಪಿ ಪ್ರೌಢಶಾಲೆ ಬಳಿ ಏ. 29ರ ಶುಕ್ರವಾರ ನಡೆದಿದೆ. ಆತ್ಮಹತ್ಯೆಗೈದವರನ್ನು ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್ಟೇಬಲ್ ಅಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಕುಂದರ್ ಎಂದು ಗುರುತಿಸಲಾಗಿದೆ. ಇವರು ಇಂದು ಆದಿಉಡುಪಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಉತ್ತರ ಪತ್ರಿಕೆ ಕೊಠಡಿಯ ಭದ್ರತಾ ನಿರ್ವಹಣೆಯಲ್ಲಿದ್ದ ಕರ್ತವ್ಯನಿರತರಾಗಿದ್ದ ವೇಳೆ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. Share this:TweetWhatsAppEmailPrintTelegram