ಐಪಿಎಲ್ 2022: ಸನ್ರೈಸರ್ಸ್ ವಿರುದ್ಧ ಕೊನೆ ಬಾಲ್ ನಲ್ಲಿ ರೋಚಕ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್
ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆ ಬಾಲ್ ನಲ್ಲಿ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ತಂಡ, ಅಭಿಷೇಕ್ ಶರ್ಮಾ(65) ಮತ್ತು ಏಡೆನ್ ಮಾರ್ಕ್ರಮ್ (56) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 197 ರನ್ ಗಳ ಬೃಹತ್ ಮೊತ್ತ ಸೇರಿಸಿತು.
ಗೆಲುವಿಗೆ 198 ರನ್ ಗಳ ಕಠಿಣ ಸವಾಲು ಬೆನ್ನತ್ತಿದ ಗುಜರಾತ್ ಟೈಟನ್ಸ್, ಗೆಲ್ಲಲು 23 ರನ್ಗಳ ಅಗತ್ಯವಿದ್ದಾಗ ರಶೀದ್ ಖಾನ್ (ಅಜೇಯ 31) ಮತ್ತು ರಾಹುಲ್ ತೆವಾಟಿಯ(ಅಜೇಯ 40) ಅವರು ಸಿಕ್ಸರ್ ಗಳ ಸುರಿಮಳೆಗೈದು ಗುಜರಾತ್ ಗೆ ರೋಚಕ ಗೆಲುವಿನ ಸಿಹಿ ಹಂಚಿದರು.
ಸನ್ರೈಸರ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಐದು ವಿಕೆಟ್ಗಳಿಂದ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲೇ ಉಳಿದಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ 8 ಪಂದ್ಯಗಳಲ್ಲಿ 7 ಗೆಲುವು ಮತ್ತು 1 ಪಂದ್ಯ ಸೋಲುವ ಮೂಲಕ 14 ಪಾಯಿಂಟ್ಸ್ ಗಳಿಸಿದೆ.