Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್: ಪಿವಿ ಸಿಂಧು, ಸಾತ್ವಿಕ್-ಚಿರಾಗ್ ಕ್ವಾಟರ್ ಫೈನಲ್ ಗೆ ಪ್ರವೇಶ!

ಮನಿಲಾ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಲಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.

ಸಿಂಗಾಪುರದ ಕೆಳ ಶ್ರೇಯಾಂಕದ ಯು ಯಾನ್ ಜಸ್ಲಿನ್ ಹೂಯ್ ಅವರನ್ನು ಸಿವಿ ಸಿಂಧು ನೇರ ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.

2014ರ ಗಿಮ್ಚಿಯಾನ್ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ನಾಲ್ಕನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ಪಿವಿ ಸಿಂಧು 100ನೇ ಶ್ರೇಯಾಂಕದ ಜಸ್ಲಿನ್ ಹೂಯಿ ಅವರನ್ನು 21-16 21-16 ಸೆಟ್‌ಗಳಿಂದ ಸೋಲಿಸಿದ್ದಾರೆ.

ಕ್ವಾರ್ಟರ್ ಫೈನಲ್ ನಲ್ಲಿ ಮೂರನೇ ಶ್ರೇಯಾಂಕದ ಚೈನೀಸ್ ಆಟಗಾರ್ತಿ ಹೀ ಬಿಂಗ್ ಜಿಯಾವೊ ಅವರ ವಿರುದ್ಧ ಸಿಂಧು ಸೆಣೆಸಲಿದ್ದಾರೆ.

ಮೂರನೇ ಶ್ರೇಯಾಂಕದ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜಪಾನ್‌ನ ಅಕಿರಾ ಕೊಗಾ ಮತ್ತು ತೈಚಿ ಸೈಟೊ ವಿರುದ್ಧ 21-17 21-15 ಅಂತರದಲ್ಲಿ ಜಯಗಳಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.

ವಿಶ್ವದ 7ನೇ ಶ್ರೇಯಾಂಕದ ಭಾರತೀಯ ಜೋಡಿ ಕ್ವಾರ್ಟರ್‌ಫೈನಲ್‌ ನಲ್ಲಿ ಐದನೇ ಶ್ರೇಯಾಂಕದ ಮಲೇಷಿಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅಥವಾ ಸಿಂಗಾಪುರದ ಡ್ಯಾನಿ ಬಾವಾ ಕ್ರಿಸ್ನಾಂಟಾ ಮತ್ತು ಜುನ್ ಲಿಯಾಂಗ್ ಆಂಡಿ ಕ್ವೆಕ್ ಜೋಡಿಯನ್ನು ಎದುರಿಸಲಿದೆ.

No Comments

Leave A Comment