ಹಿಂದಿ ಭಾಷೆ: ಹಿಂದಿ ರಾಷ್ಟ್ರಭಾಷೆ ಅಲ್ಲ (Hindi national language) ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ (Kichcha Sudeepa) ಅವರು ಹೇಳಿರುವುದು ಸರಿಯಿದೆ. ರಾಜ್ಯಗಳು ಭಾಷಾವಾರು ಪ್ರಾಂತ್ಯಗಳು ಆದ ಮೇಲೆ ಆಯಾ ರಾಜ್ಯಗಳಲ್ಲಿರುವ ಸ್ಥಳೀಯ ಮಾತೃ ಭಾಷೆಯೇ ಸಾರ್ವಭೌಮವಾಗುತ್ತದೆ. ಅದನ್ನೇ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಅವರು ಹೇಳಿರುವ ವಿಚಾರ ಸರಿಯಿದೆ. ಇದನ್ನು ಎಲ್ಲರೂ ಮನಗಂಡು ಗೌರವ ಕೊಡಬೇಕು ಎಂದರು.