Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕೊರೊನ ನಾಲ್ಕನೇ ಅಲೆಯ ಸೃಷ್ಟಿಕರ್ತಯಾರು ಸ್ವಾಮಿ?ರಾಜಕೀಯ ಮುಖ೦ಡರೇ?ಲಸಿಕಾ ಕ೦ಪನಿಯೋ?ಆಸ್ಪತ್ರೆ ಮಾಲಿಕರೋ?ಇದರ ಹೆಸರಲ್ಲಿ ಯಾರಿಗೆಷ್ಟು %?

ಕೊರೊನಾದ ಬಗ್ಗೆ ಜನರು ಈ ಹಿ೦ದೆ ಎಲ್ಲಾ ನಿಯಮವನ್ನು ಪಾಲಿಸಿದರ ಪರಿಣಾಮವಾಗಿ ಸಾಯುವರ ಸ೦ಖ್ಯೆ ಕಡಿಮೆಯಾಯಿತೇ ಹೊರತು ಯಾರ ಪ್ರಯತ್ನದಿ೦ದಲ್ಲವೆ೦ಬುದಕ್ಕೆ ಕೊರೊನಾವೇ ಪ್ರತ್ಯಕ್ಷ ಸಾಕ್ಷಿ. ಬಹುತೇಕ ಮ೦ದಿ ಲಸಿಕೆಯನ್ನು ಪಡೆದಕಾರಣದಿ೦ದಾಗಿ ಸಾವಿನ ಸ೦ಖ್ಯೆ ಕಡಿಮೆಯಾಗಿದೆ. ಒ೦ದು ವೇಳೆ ಮತ್ತೆ ಕೊರೊನಾ ಬರುವುದಾರರೇ ನಾವೆಲ್ಲರೂ ಲಸಿಕೆಯನ್ನು ಪಡೆದುಕೊ೦ಡದ್ದು ವ್ಯರ್ಥವೇ ಸ್ವಾಮಿ? ಎ೦ದು ಬೀದಿ-ಬೀದಿಯಲ್ಲಿ ಮನೆ-ಮನೆಯಲ್ಲಿ ಜನರು ಸರಕಾರವನ್ನು ಹಾಗೂ ತಜ್ಞರನ್ನು ಪ್ರಶ್ನಿಸಲಾರ೦ಭಿಸಿದ್ದಾರೆ.

ಇದುವರೆಗೆ ಯಾವ ರೀತಿಯಲ್ಲಿ ಕೊರೊನಾದ ಬಗ್ಗೆ ಜಾಗೃತಿಯನ್ನು ವಹಿಸಬೇಕೆ೦ದು ಜನರಿಗೆ ಅರಿವಿರಲಿಲ್ಲ. ಇದೀಗ ಹಿ೦ದೆ ಯಾವ ರೀತಿಯಲ್ಲಿ ಅದರ ಬಗ್ಗೆ ಜಾಗೃತಿಯನ್ನುವಹಿಸಬೇಕೆ೦ದು ಜನ ಚೆನ್ನಾಗಿ ಅರಿತ್ತಿದ್ದಾರೆ. ಕೊರೊನಾದಿ೦ದಾಗಿ ಬಡಜನರು,ಕೂಲಿಕಾರ್ಮಿಕರು, ಸಣ್ಣ ಮತ್ತು ದೊಡ್ದ ವ್ಯಾಪಾರಸ್ಥರು ಕೋಟ್ಯಾ೦ತರ ರೂಪಾಯಿ ನಷ್ಟಕ್ಕೆ ಒಳಗಾದರೇ ಹೊರತು ಸರಕಾರವಲ್ಲ,ರಾಜಕೀಯ ಮುಖ೦ಡರಲ್ಲ, ವೈದ್ಯರಲ್ಲ, ತಜ್ಞರಲ್ಲ ವೆ೦ಬುದು ಜನರ ಅಭಿಪ್ರಾಯ.
ಜನರಲ್ಲಿ ಭಯದ ವಾತಾವರಣವನ್ನು ದೃಶ್ಯಮಾಧ್ಯಮಗಳ ಮುಖಾ೦ತರ ರಾಜಕೀಯ ಮುಖ೦ಡರು ಮತ್ತೆ ಕೊರೊನಾದ ನಾಲ್ಕನೇ ಅಲೆ ಬರುವುದಾಗಿ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಇದೀಗ ಮತ್ತೆ ಕೊರೊನಾ ಬರುತ್ತದೆ ಎ೦ದು ಸುದ್ದಿಯನ್ನು ಬಿತ್ತರಿಸುತ್ತಿರುವ ಮಾಧ್ಯಮಗಳಿಗೆ ಜನ ಛೀಮಾರಿ ಹಾಕುತ್ತಿದ್ದಾರೆ.ದೇವರ ಹೆಸರಾಯಿತು ಇದೀಗ ಕೊರೊನಾ ಹೆಸರಿನಲ್ಲಿ ತಮ್ಮ ರಾಜಕೀಯವನ್ನು ಉಳಿಸಿಕೊಳ್ಳುವ ದೃಷ್ಠಿಯಿ೦ದ ಎಲ್ಲಾ ನಾಟಕವನ್ನು ಮಾಡುತ್ತಿದ್ದಾರೆ ರಾಜಕೀಯ ಪಕ್ಷಗಳು.ಜನರ ಮನಸನ್ನು ಬೇರೆಡೆಗೆ ಸೆಳೆಸಿ ತಾವು ಮಾಡಿದ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನವೇ ಎ೦ದು ಜನರು ಹೇಳುತ್ತಿದ್ದಾರೆ.
ಕೊರೊನ ನಾಲ್ಕನೇ ಅಲೆಯ ಸೃಷ್ಟಿಕರ್ತಯಾರು ಸ್ವಾಮಿ? ರಾಜಕೀಯ ಮುಖ೦ಡರೇ?ಲಸಿಕಾ ಕ೦ಪನಿಯೋ?ಆಸ್ಪತ್ರೆ ಮಾಲಿಕರೋ?ಇದರ ಹೆಸರಲ್ಲಿ ಯಾರಿಗೆಷ್ಟು %?ಇದೇಯೋ ದೇವರೇ ಬಲ್ಲ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವಾರು ಪ್ರಶ್ನೆಗಳು ವೈರಲ್ ಆಗುತ್ತಿದೆ.ಈ ಬಗ್ಗೆ ಯಾರ ಬಳಿ ಉತ್ತರವಿದೆ?ಎ೦ದು ಜನರು ಕೇಳುತ್ತಿದ್ದಾರೆ. ನಾಲ್ಕನೇ ಅಲೆಯು ವಿದ್ಯಾರ್ಥಿಗಳ ತರಗತಿ ಫೀಸ್ ಕಟ್ಟಿದ ಬಳಿಕ ಬರುತ್ತಾ?ಇಲ್ಲ ಫೀಸ್ ಕಟ್ಟುವ ಮೊದಲು ಬರುತ್ತಾ? ಎ೦ಬುವುದರ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಿರುವುದು ಸಹಜವಾಗಿದೆ.

Comments
  • ರಾಜಕಿಯದಲ್ಲಿ ಹಗರಣಗಳಿದ್ದಾಗ, ಸಚಿವರು ಜೈಲು ಸೇರುವ ಭಯವಿರುವಾಗ, ತಪ್ಪಿತಸ್ತರನ್ನು ರಕ್ಷಿಸಬೇಕಾದಗ, ಜನರನ್ನು ಸುಮ್ಮನಾಗಿಸಾಬೇಕಾದಾಗ ಜನರ ಬಾಯಿಯನ್ನಾ ಮಾಸ್ಕ್ ಹಾಕಿಸಿ ಮುಚ್ಚಬೇಕು ಅನ್ನಿಸುತಿರುವಾಗ ಕೋರೊನ ಭಯ ಹುಟ್ಟಿಸಬೇಕು

    April 26, 2022

Leave A Comment