Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಪುಷ್ಪ ಸಿನಿಮಾ ಮಾದರಿಯಲ್ಲೇ ಗಂಡನ ಕತ್ತು ಸೀಳಿದ ಪತ್ನಿ!

ಹನುಮಕೊಂಡ:ಏ.26: ಮಹಿಳೆಯೊಬ್ಬಳು ನಟ ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಚಿತ್ರದ ಮಾದರಿಯಲ್ಲೇ ತನ್ನ ಪತಿಯ ಕುತ್ತಿಗೆ ಕೊಯ್ದಿರುವ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಒಂದು ತಿಂಗಳ ಹಿಂದಷ್ಟೇ ಅರ್ಚನಾ ರಾಜುನನ್ನು ಮದುವೆ ಆಗಿದ್ದಳು. ನವದಂಪತಿ ದಮೇರಾ ಮಂಡಲದ ಪಸರಗೊಂಡ ಗ್ರಾಮದಲ್ಲಿ ನೆಲೆಸಿದ್ದರು. ಸೋಮವಾರ ರಾತ್ರಿ ಕೋಣೆಯಿಂದ ನರಳಾಡುವ ಶಬ್ದವನ್ನು ರಾಜು ಕುಟುಂಬಸ್ಥರು ಕೇಳಿದ್ದಾರೆ. ಏನೆಂದು ತಿಳಿಯಲು ಓಡಿ ಹೋಗಿ ನೋಡಿದಾಗ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಜುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ರಾಜುವಿಗೆ ಚಿಕಿತ್ಸೆ ನೀಡಲಾಗಿದೆ.

ಇನ್ನು ಘಟನೆ ತಿಳಿದ ಬಳಿಕ ಅರ್ಚನಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನನ್ನ ಪತಿಯೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ತುಂಬಾ ಸಂತೋಷದಿಂದಲೇ ಮದುವೆ ಆದೆ. ಆದರೆ ನಾನೇನು ಮಾಡಿದೆ ಅಂತಾ ನನಗೆ ತಿಳಿಯುತ್ತಿಲ್ಲ ಎಂದು ಅರ್ಚನಾ ಹೇಳಿಕೆ ನೀಡಿದ್ದಾಳೆ.

ಘಟನೆ ನಡೆದ ಬೆನ್ನಲ್ಲೇ ರಾಜು ಕುಟುಂಬಸ್ಥರು ಅರ್ಚನಾ ಜತೆ ಮಾತನಾಡಿದ್ದಾರೆ. ಆದರೆ ಆಕೆ ತಾನು ಮಾನಸಿಕ ಅಸ್ವಸ್ಥಳು ಎಂಬಂತೆ ನಟಿಸಿದಳು ಎಂದು ರಾಜು ಸಹೋದರ ಎಂ. ಶ್ರೀಶೈಲಂ ಹೇಳಿಕೆ ನೀಡಿದ್ದಾರೆ.

ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

No Comments

Leave A Comment