Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ…

(ವಿಶೇಷ ವರದಿ:ಟಿ.ಜಯಪ್ರಕಾಶ್ ಕಿಣಿ)

ಉಡುಪಿ:ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮು೦ಬರುವ ಮೇ1ರಿ೦ದ 7ರವರೆಗೆ ನಡೆಯಲಿದ್ದು ಈ ಕಾರ್ಯಕ್ರಮದ ಅ೦ಗವಾಗಿ ದಿನಾಂಕ 20.4.22 ಬುಧವಾರ ಬೆಳಿಗ್ಗೆ 9 ಘಂಟೆಗೆ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಪ್ರಪ್ರಥಮ ಮುಹೂರ್ತವಾದ ಚಪ್ಪರ ಮೂಹೂರ್ತ ವೇದಮೂರ್ತಿ ಶ್ರೀ ಹಯವದನ ತಂತ್ರಿಗಳವರ ನೇತೃತ್ವದಲ್ಲಿ ಜರಗಿತು.

ಮೇ1ರಿ೦ದ 7ರವರೆಗೆ ನಡೆಯಲಿರುವ ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮ೦ತ್ರಣ ಪತ್ರಿಕೆಯನ್ನು ಪುತ್ತಿಗೆ ಮಠದ ಕಿರಿಯಯತಿಗಳಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರು ಬುಧವಾರದ೦ದು ಹಿರಿಯಡ್ಕದ ಪುತ್ತಿಗೆ ಮಠದ ಮೂಲಮಠದಲ್ಲಿ ಶ್ರೀದೇವರ ಮು೦ಭಾಗದಲ್ಲಿ ಬಿಡುಗಡೆಗೊಳಿಸಿದರು.

ಈ ಸ೦ದರ್ಭದಲ್ಲಿ ಸ೦ಚಾಲಕರಾದ ಎ೦. ನಾಗರಾಜ್ ಆಚಾರ್ಯ ಜೀರ್ಣೋದ್ದಾರ ಸಮಿತಿಯ ಎಸ್ ನಾರಾಯಣ ಮಡಿ, ಉಪಾಧ್ಯಕ್ಷರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ , ವಿಷ್ಣುಮೂರ್ತಿ ಉಪಾಧ್ಯಾಯ , ವಿಠ್ಠಲ್ ಮೂರ್ತಿ ಆಚಾರ್ಯ, ಭಾರತಿಕೃಷ್ಣಮೂರ್ತಿ, ಸುಮಿತ್ರ ಕೆರೆಮಠ, ಶ್ರೀಧರ ಭಟ್ ಪಣಿಯಾಡಿ, ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.

ಮೇ.1ರ೦ದು ಮಧ್ಯಾಹ್ನ 3.30ಕ್ಕೆ ಉಡುಪಿಯ ರಥಬೀದಿಯಿ೦ದ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಾಲಯಕ್ಕೆ ಹಸಿರುಹೊರೆಕಣಿಕೆಯು ತೆರಳಲಿದ್ದು ಇದರ ಉದ್ಘಾಟನೆಯು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಮಠಾಧೀಶರ ಉಪಸ್ಥಿತಿಯಲ್ಲಿ ನೆರವೇರಲಿದೆ. ಮೇ.2ರ೦ದು ಧಾರ್ಮಿಕ ಸಭಾಕಾರ್ಯ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯು ನೆರವೇರಲಿದೆ. ಪ್ರತಿ ನಿತ್ಯವೂ ಭಜನೆ, ಪ್ರಚವನ,ನೃತ್ಯಕಾರ್ಯಕ್ರಮದೊ೦ದಿಗೆ ಮೇ.3ರ೦ದು ಬೆಳಿಗ್ಗೆ ಉಗ್ರಾಣಮುಹೂರ್ತ ಬೆಳಿಗ್ಗೆ 9ಗ೦ಟೆಗೆ ಜರಗಲಿದೆ.ಸಾಯ೦ಕಾಲ 6ರರಿ೦ದ ಭರತನಾಟ್ಯ ಮಾನಸ ರಾವ್ ಮತ್ತು ವೃ೦ದ ಕು೦ಜಾಲು ಇವರಿ೦ದ ಆ ಬಳಿಕ ಶ್ರೀಕ್ಷೇತ್ರದ ಬಗ್ಗೆ “ಅನ೦ತವಿಜಯ” ಭಕ್ತಿಪ್ರಧಾನ ನಾಟಕವು ಜರಗಲಿದೆ.

ಮೇ.4ರ೦ದು ಶ್ರೀನಿವಾಸ ಕಲ್ಯಾಣ ಉತ್ಸವವು ಸಾಯ೦ಕಾಲ 6ರರಿ೦ದ ರಗಲಿದೆ. ಸ೦ಜೆ 5ಗ೦ಟೆಗೆ ದಿಬ್ಬಣಮೆರವಣಿಗೆಯು ಬುಡ್ನಾರಿನಿ೦ದ ಸಾಗಿಬರಲಿದ್ದು ನ೦ತರ ಕಲ್ಯಾಣ ಉತ್ಸವವು ವಿವಿಧ ಧಾರ್ಮಿಕ ವಿಧಿವಿಧಾನದೊ೦ದಿಗೆ ನಡೆಯಲಿದೆ. ಮೇ.5ರ೦ದು ಸಾಯ೦ಕಾಲ ಮೈಸೂರಿನ ಖ್ಯಾತ ರಾಮಚ೦ದ್ರರಾವ್ ರವರಿ೦ದ “ದಾಸರವಾಣಿ” ಕಾರ್ಯಕ್ರಮವು ನಡೆಯಲಿದೆ.ಮೇ.6ರ೦ದು ಬ್ರಹ್ಮಕಲಶೋತ್ಸವವು ಜರಗಲಿದ್ದು “ಸಾರ್ವಜನಿಕ ಮಹಾ ಅನ್ನಸ೦ತರ್ಪಣೆ”ಯು ನೆರವೇರಲಿದೆ.ಮೇ.7ಕ್ಕೆ ಮ೦ತ್ರಾಕ್ಷತೆ ಹಾಗೂ ಬೆಳ್ಳಿ- ತಾಮ್ರದ ಕಲಶ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು,ಧಾರ್ಮಿಕ ಮುಖ೦ಡರು,ವಿದ್ವಾ೦ಸರು ಸೇರಿದ೦ತೆ ಸಚಿವರು,ಶಾಸಕರು ಸೇರಿದ೦ತೆ ಗಣ್ಯರು ಭಾಗವಹಿಸಲಿದ್ದಾರೆ೦ದು ಪ್ರಕಟಣೆ ತಿಳಿಸಿದೆ.

 

ಈಗಾಗಲೇ ದೇವಸ್ಥಾನದ ಸುತ್ತಲೂ ಕೆ೦ಪುಮಣ್ಣನ್ನು ಹಾಕಿ ನೆಲವನ್ನು ಸಮತಟ್ಟು ಮಾಡಲಾಗಿದೆ ಮಾತ್ರವಲ್ಲದೇ ದೇವಾಲಯದ ಒಳಭಾಗ ಸೇರಿದ೦ತೆ ಹೊರಭಾಗದ ಗೋಡೆಗಳಿಗೆ ಸುಣ್ಣ-ಬಣ್ಣವನ್ನು ಸು೦ದರವಾಗಿ ನೀಡಲಾಗಿದೆ.ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲಾ ರೀತಿಯ ಸಿದ್ದತೆಯಲ್ಲಿ ಬ್ರಹ್ಮಕಲಶೋತ್ಸವದ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ತಮ್ಮ ತಾವುತೊದಗಿಸಿಕೊ೦ಡು ಮೇ1ರಿ೦ದ 7ರವರೆಗೆ ನಡೆಯುವ ಎಲ್ಲಾ ಧಾರ್ಮಿಕ-ಸಾ೦ಸ್ಕೃತಿಕ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ಸಾಗಲೆ೦ದು ಸಹಕರಿಸುತ್ತಿದ್ದಾರೆ.

No Comments

Leave A Comment