Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕಾಣದೆ ಕೈಗಳು ಕೆಲಸ ಅಗಲಿಕರಣವಾದ ರಸ್ತೆಯ ವಿಭಾಜಕ ತೆರವು : ಸಾರ್ವಜನಿಕರ ತೀವ್ರ ಆಕ್ಷೇಪ

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದಿಂದ ಡಿಸಿ ಆಪೀಸೀಗೆ ಹೋಗುವ ಅಂಬಾಗಿಲು ಮಣಿಪಲ ಪೆರಂಪಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯ ವಿಭಾಜಕ ತೆರವು ಕಾರ್ಯಾಚರಣೆ ಭರದಿಂದಸಾಗಿದೆ  ಈ ಹಿಂದೆ ಪರ್ಕಳ ರಸ್ತೆಯ  ಅಗಲಿಕರಣದ ಭೂ ಸಂತ್ರಸ್ತರಿಗೆ ಬಿಡುಗಡೆಯಾದ ಹಣದ ಮೊತ್ತ ವಿತರಿಸಲು ಅಲ್ಪಮೊತ್ತದ ಹಣ. ಸರಕಾರವುಬಿಡುಗಡೆ ಯಾದ ಹಿನ್ನೆಲೆಯಲ್ಲಿ. ಆ ಮೊತ್ತದಹಣವನ್ನು ಅಂದಿನ ಮಾಜಿ ಸಚಿವರು, ಪ್ರಥಮ ಹಂತದಲ್ಲಿ ಮಣೆಪಾಲ ಅಂಬಾಗಿಲು ಪೆರಂಪಳ್ಳಿ ಅಗಲಿಕರಣಕ್ಕೆ ಈಹಣವನ್ನು ಉಪಯೊಗಿಸಿ ಅಗಲಿಕರಿಸಿದ್ದರು.

ಆದರೆ ಎರಡು ಮೂರು ವರ್ಷಕಳೆಯುವುದರ ಒಳಗೆಯೇ ಮತ್ತೆ ಈ ನೂತನ ರಸ್ತೆಯ ವಿಭಾಜಕವನ್ನು ಒಡೆಯುವುದು ಅಕ್ಷಮ್ಯ ಅಪರಾಧವಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಗೆ ಸಂಪರ್ಕ ಕೊಂಡಿಯಂತಿರುವ ಈರಸ್ತೆಯ ವಿಭಾಜಕ ತೆರವುಗೊಳಿಸಿರುವುದು ಅಧಿಕಾರಿಗಳು ಬದಲಾದಂತೆ, ರಸ್ತೆಯ ವಿನ್ಯಾಸವನ್ನು ಮನಬಂದಂತೆ ಬದಲಾಯಿಸುವುದುಮತ್ತು,ಒಡೆಯುವುದರಿಂದ, ಈ ಕಾಮಗಾರಿಗೆ ಸಾರ್ವಜನಿಕರ ಹಣ ಪೋಲಾಗುತ್ತಿದೆ, ರಸ್ತೆ ವಿಭಾಜಕ ಕೆಡವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದೆ,

ಎಂದು ರಾಜ್ಯ ಯುವ ಕಾಂಗ್ರೆಸ್ ನಾ.ಮಾಜಿ ಕಾರ್ಯದರ್ಶಿ ಜಯಶೆಟ್ಟಿ ಬನ್ನಂಜೆ ಗಣೇಶ್ ರಾಜ್ ಸರಳೇಬೆಟ್ಟು,ಮಾಜಿ ನಗರಸಭಾ ಸದಸ್ಯರಾದ ಸುರೇಶ ಶೇರಿಗಾರ್ ಬೈಲಕೆರೆ, ವಾಲ್ಟರ್ ಡಿಸೋಜಾ ಕೊಳಲಗಿರಿ, ಮೊದಲಾದವರು ಜಿಲ್ಲಾಡಳಿತಕ್ರಮ ಖಂಡನೀಯ ಎಂದಿದ್ದಾರೆ.

 

No Comments

Leave A Comment