ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯ ನಂತರವೂ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಾ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಮೊದಲ ಮಗುವನ್ನ ಬರಮಾಡಿಕೊಂಡ ಸಂತಸದ ಸುದ್ದಿಯನ್ನ ಫ್ಯಾನ್ಸ್‌ಗೆ ತಿಳಿಸಿದ್ದರು. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದಿರುವ ನಟಿ ಪ್ರಿಯಾಂಕ ಈಗ ಮಗುವಿಗೆ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಕೆಲ ತಿಂಗಳ ಹಿಂದೆ ಮೊದಲ ಮಗುವನ್ನ ಬರಮಾಡಿಕೊಂಡಿದ್ದರು. ಈವರೆಗೂ ತಮ್ಮ ಮಗುವಿನ ಫೋಟೋ ತೋರಿಸದೇ ಖಾಸಗಿತನ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ತಮ್ಮ ಮಗಳಿಗೆ ಮಾಲತಿ ಮೇರಿ ಚೋಪ್ರಾ ಜೋನಸ್ ಅಂತಾ ಹೆಸರು ಇಡಲಾಗಿದೆ ಎಂದು ತಿಳಿದು ಬಂದಿದೆ.
ಹಾಲಿವುಡ್ ಸ್ಟಾರ್ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ನಟಿ ಪ್ರಿಯಾಂಕಾ ಅಮೆರಿಕಾದಲ್ಲೇ ನೆಲೆಸಿದ್ದಾರೆ. ಹೊರದೇಶದ ಸಂಸ್ಕೃತಿಯ ನಡುವೆ ಜೀವನ ನಡೆಸುತ್ತಿದ್ದರು. ತಮ್ಮ ತಾಯ್ನಾಡಿನ ಮೇಲೆ ಪ್ರೀತಿ, ಗೌರವ ಹೊಂದಿದ್ದಾರೆ. ಇದೀಗ ಪ್ರಿಯಾಂಕಾ ಅವರು ತಮ್ಮ ಮುದ್ದಾದ ಮಗಳಿಗೆ ಮಾಲತಿ ಎಂದು ಸಂಸ್ಕೃತ ಮೂಲದ ಹೆಸರನ್ನ ನಾಮಕರಣ ಮಾಡಿರುವುದು ವಿಶೇಷ.
ಒಟ್ನಲ್ಲಿ ಸಿನಿಮಾಗಳ ಜತೆಗೆ ಸಂಸಾರಿಕ ಜೀವನವನ್ನ ಬ್ಯಾಲೆನ್ಸ್ ಮಾಡುತ್ತಾ ತಮ್ಮ ಚಿತ್ರಗಳ ಮೂಲಕ ಸಿನಿಪ್ರಿಯರನ್ನ ರಂಜಿಸುತ್ತಿರೋ ನಟಿಯ ಚಿತ್ರಕ್ಕಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.