Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ತುರ್ತು ಭೂ ಸ್ಪರ್ಶ ವೇಳೆ ಟ್ರಕ್‌ಗೆ ಡಿಕ್ಕಿಯಾದ ವಿಮಾನ-ಪೈಲಟ್ ಸೇರಿ ಆರು ಸಾವು

ಫೋರ್ಟ್ -ಜಿ ಪ್ರಿನ್ಸ್:ಏ ,21 : ಕಿರಿದಾದ ವಿಮಾನವೊಂದು ತುರ್ತು ಭೂಸ್ಪರ್ಶಗೊಳ್ಳುತ್ತಿದ್ದ ಸಂದರ್ಭ ಟ್ರಕ್‍ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪೈಲೆಟ್ ಸೇರಿ 6 ಮಂದಿ ಸಾವನ್ನಪ್ಪಿರುವ ಘಟನೆ ಐಟಿ ರಾಜಧಾನಿ ಫೋರ್ಟ್-ಜಿ ಪ್ರಿನ್ಸ್ ನಲ್ಲಿ ನಡೆದಿದೆ.

ಜಾಕ್ಮಿಲ್ ಕಮ್ಯೂನ್‍ಗೆ ತೆರಳುತ್ತಿದ್ದ ಸೆಸ್ನಾ-207 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತುರ್ತು ಭೂ ಸ್ಪರ್ಶಕ್ಕೆ ಪೈಲಟ್ ಸ್ಥಳ ಹುಡುಕಾಟ ನಡೆಸಿ ಸಿಗದಿದ್ದಾಗ, ರಸ್ತೆ ಮೇಲೆಯೇ ಇಳಿಸಲು ಯತ್ನಿಸಿದ್ದಾರೆ. ಈ ವೇಳೆ ರೂಟ್ ಡೆಸ್ ರೈಲ್ಸ್ ಮಾರ್ಗಗಳಲ್ಲಿ ಟ್ರಕ್ ಆಗಮಿಸುತ್ತಿತ್ತು. ಎರಡೂ ಮುಖಾಮುಖಿಯಾದ ವೇಳೆ ಪೈಲಟ್‌ಗಾಗಲೀ, ಟ್ರಕ್ ಚಾಲಕನಿಗಾಗಲೀ ಅಪಘಾತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪರಸ್ಪರ ಡಿಕ್ಕಿ ಹೊಡೆದಿವೆ. ಇದರಿಂದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಡಿಕ್ಕಿ ರಭಸಕ್ಕೆ ಟ್ರಕ್ ಪಲ್ಟಿಯಾಗಿದ್ದು, ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದೆ. ತತ್‌ಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ.

No Comments

Leave A Comment