
ವ್ಯಕ್ತಿಯೊಬ್ಬನಿಂದ ತಲೆಯ ವಿಗ್ ಹಾಗೂ ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಾಟ : ಕಸ್ಟಮ್ಸ್ ಅಧಿಕಾರಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ
ನವದೆಹಲಿ : ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ತನ್ನ ತಲೆಯ ವಿಗ್ ಹಾಗೂ ಗುದನಾಳದಲ್ಲಿ ಅಕ್ರಮ ಚಿನ್ನವನ್ನು ಬಚ್ಚಿಟ್ಟು ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಮತ್ತು ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ನವದೆಹಲಿಯ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (ಎಲ್‌ಎಫ್‌ಟಿ) ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ವ್ಯಕ್ತಿಯೊಬ್ಬ ತನ್ನ ವಿಗ್ ಮತ್ತು ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ 30.55 ಲಕ್ಷ ರೂ. ಮೌಲ್ಯದ ಚಿನ್ನ (630.45 ಗ್ರಾಂ) ವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿ ತಿಳಿದು ಬಂದಿದೆ.
ಅಬುಧಾಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವ್ಯಕ್ತಿಯ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು 3ನೇ ಟರ್ಮಿನಲ್‌ನಲ್ಲಿ ತಡೆದು ಆತನನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಆಸಾಮಿ ತನ್ನ ವಿಗ್‌ನಲ್ಲಿ ವಿಗ್‌ನಲ್ಲಿ ಹಾಗೂ ಗುದನಾಳದಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ನಂತರ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಯಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.