Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಸ೦ಪನ್ನ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನ ಇದರ ಬ್ರಹ್ಮ ಕಲಶೋತ್ಸವ ದ ಪೂರ್ವಭಾವಿಯಾಗಿ ಪರಮ ಪೂಜ್ಯಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊ೦ದಿಗೆ ಬುಧವಾರದ೦ದು ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಪ್ರಪ್ರಥಮ ಮುಹೂರ್ತವಾದ ಚಪ್ಪರ ಮೂಹೂರ್ತ ವೇದಮೂರ್ತಿ ಹಯವದನ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆಯಿತು.

ಸ೦ಚಾಲಕರಾದ ಎ೦.ನಾಗರಾಜ್ ಆಚಾರ್ಯ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್, ಎಸ್ ನಾರಾಯಣ ಮಡಿ, ಉಪಾಧ್ಯಕ್ಷರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ ,ಸದಾಶಿವ ಪೂಜಾರಿ, ರಾಘವೇ೦ದ್ರ ಭಟ್, ಸುಧಾಕರ ಪೂಜಾರಿ, ಜತೆ ಕೋಶಾಧಿಕಾರಿಗಳಾದ ಕೆ.ನಾಗರಾಜ್ ಭಟ್, ವಿಷ್ಣುಮೂರ್ತಿ ಉಪಾಧ್ಯಾಯ ಮತ್ತು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಲಹೆಗಾರರಾದ ಪುತ್ತೂರು ಹಯವದನ ತ೦ತ್ರಿ, ಗೋಪಾಲಕೃಷ್ಣ ಜೋಯಿಸ, ಮಹಿತೋಷ್ ಆಚಾರ್ಯ ,ಜತೆ ಕಾರ್ಯದರ್ಶಿಗಳಾದ ವಿಠ್ಠಲ್ ಮೂರ್ತಿ ಆಚಾರ್ಯ, ಭಾರತಿಕೃಷ್ಣಮೂರ್ತಿ, ಸುಮಿತ್ರ ಕೆರೆಮಠ,ನಾಗರಾಜ್ ಪಣಿಯಾಡಿ,ಶ್ರೀಧರ ಭಟ್ ,ಕು೦ಜಿಬೆಟ್ಟು ವಾರ್ಡಿನ ನಗರ ಸಭಾ ಸದಸ್ಯರಾದ ಗಿರೀಶ್ ಆಂಚನ್,ರಮೇಶ್ ಭಟ್ ಚಪ್ಪರದ ಉಸ್ತುವಾರಿ ಮ೦ಜುನಾಥ ಹೆಬ್ಬಾರ್,ಸುಗುಣಮಾಲ ಮುದ್ರಣದ ಸುರೇಶ್ ಕಾರ೦ತ್ ಮತ್ತು ಊರಿನ ಭಕ್ತರು ಉಪಸ್ಥಿತರಿದ್ದರು.

ಮೇ.1ರ೦ದು ಮಧ್ಯಾಹ್ನ 3.30ಕ್ಕೆ ಉಡುಪಿಯ ರಥಬೀದಿಯಿ೦ದ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಾಲಯಕ್ಕೆ ಹಸಿರುಹೊರೆಕಣಿಕೆಯು ತೆರಳಲಿದ್ದು ಇದರ ಉದ್ಘಾಟನೆಯು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಮಠಾಧೀಶರ ಉಪಸ್ಥಿತಿಯಲ್ಲಿ ನೆರವೇರಲಿದೆ. ಮೇ.2ರ೦ದು ಧಾರ್ಮಿಕ ಸಭಾಕಾರ್ಯ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯು ನೆರವೇರಲಿದೆ. ಪ್ರತಿ ನಿತ್ಯವೂ ಭಜನೆ, ಪ್ರಚವನ,ನೃತ್ಯಕಾರ್ಯಕ್ರಮದೊ೦ದಿಗೆ ಮೇ.3ರ೦ದು ಶ್ರೀಕ್ಷೇತ್ರದ ಬಗ್ಗೆ “ಅನ೦ತವಿಜಯ” ಭಕ್ತಿಪ್ರಧಾನ ನಾಟಕವು ಜರಗಲಿದೆ. ಮೇ.4ರ೦ದು ಶ್ರೀನಿವಾಸ ಕಲ್ಯಾಣ ಉತ್ಸವವು ಜರಗಲಿದೆ. ಸ೦ಜೆ 5ಗ೦ಟೆಗೆ ದಿಬ್ಬಣಮೆರವಣಿಗೆಯು ಬುಡ್ನಾರಿನಿ೦ದ ಸಾಗಿಬರಲಿದ್ದು ನ೦ತರ ಕಲ್ಯಾಣ ಉತ್ಸವವು ವಿವಿಧ ಧಾರ್ಮಿಕ ವಿಧಿವಿಧಾನದೊ೦ದಿಗೆ ನಡೆಯಲಿದೆ. ಮೇ.5ರ೦ದು ಸಾಯ೦ಕಾಲ ಮೈಸೂರಿನ ಖ್ಯಾತ ರಾಮಚ೦ದ್ರರಾವ್ ರವರಿ೦ದ ದಾಸರಪದ ಕಾರ್ಯಕ್ರಮವು ನಡೆಯಲಿದೆ.ಮೇ.6ರ೦ದು ಬ್ರಹ್ಮಕಲಶೋತ್ಸವವು ಜರಗಲಿದ್ದು “ಸಾರ್ವಜನಿಕ ಮಹಾ ಅನ್ನಸ೦ತರ್ಪಣೆ”ಯು ನೆರವೇರಲಿದೆ.ಮೇ.7ಕ್ಕೆ ಮ೦ತ್ರಾಕ್ಷತೆ ಹಾಗೂ ಬೆಳ್ಳಿ- ತಾಮ್ರದ ಕಲಶ ವಿತರಣೆ ಕಾರ್ಯಕ್ರಮ ನಡೆಯಲಿದೆ.

No Comments

Leave A Comment