Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರದ ಬೋಟ್ ಮುಳುಗಡೆ :70 ಲಕ್ಷ ರೂ. ನಷ್ಟ- 7 ಮಂದಿಯ ರಕ್ಷಣೆ

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ  ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರದ ಬೋಟು ಮಹಾರಾಷ್ಟ್ರದ ರತ್ನಗಿರಿ ಸಮೀಪ ಮುಳುಗಡೆಗೊಂಡಿದ್ದು ಅದರಲ್ಲಿದ್ದ 7 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಕಡೆಕಾರು ಪಡುಕರೆ ಭಗವಾನ್‌ದಾಸ್‌ ಕೋಟ್ಯಾನ್‌ ಅವರಿಗೆ ಸೇರಿದ ದಿವ್ಯಶಕ್ತಿ ಆಳಸಮುದ್ರ ಬೋಟ್‌ ಎ.10ರಂದು ಮಲ್ಪೆಯಿಂದ ತೆರಳಿತ್ತು ಎನ್ನಲಾಗಿದೆ.

ಈ ಬೋಟ್ ಎ. 13ರಂದು ರಾತ್ರಿ 9.30ರ ವೇಳೆಗೆ ರತ್ನಗಿರಿಯ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಟ್ಟಿಯಾದ ವಸ್ತು ಬೋಟಿನ ತಳಭಾಗಕ್ಕೆ ತಾಗಿದ್ದು ಪರಿಣಾಮ ಬೋಟಿನ ಒಳಕ್ಕೆ ನೀರು ಬರಲಾರಂಭಿಸಿತು. ಸಮೀಪದಲ್ಲಿದ್ದ ನೀಲಾದ್ರಿ ಮತ್ತು ಸುವರ್ಣ ಛಾಯ ಬೋಟಿನವರಿಗೆ ಮಾಹಿತಿ ನೀಡಿದಾಗ, ತತ್‌ಕ್ಷಣ ಧಾವಿಸಿ ಬಂದ ಅವರು ಬೋಟಿನಲ್ಲಿದ್ದ ದೇವೇಂದ್ರ, ಸತೀಶ, ಮಾದಪ್ಪ, ನವೀನ, ಮಹೇಂದ್ರ, ಚಂದ್ರಕಾಂತ ಮತ್ತು ರವಿ ಅವರನ್ನು ರಕ್ಷಿಸಿದರು ಎಂದು ಮಾಹಿತಿ ತಿಳಿಯಲಾಗಿದೆ.

ದಿವ್ಯಶಕ್ತಿ ಬೋಟ್‌ ಸಂಪೂರ್ಣ ಮುಳುಗಡೆಗೊಂಡಿದ್ದು ಅದರಲ್ಲಿ ಡೀಸೆಲ್‌, ಮೀನು ಹಾಗೂ ಇನ್ನಿತರ ಪರಿಕರಗಳು ಸಮುದ್ರ ಪಾಲಾಗಿವೆ. ಸುಮಾರು 70 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಸಮುದ್ರದ ನೀರಿನ ಅಡಿಯಲ್ಲಿ ಗಟ್ಟಿಯಾದ ಕಲ್ಲು ಢಿಕ್ಕಿ ಹೊಡೆಯುವುದರ ಪರಿಣಾಮ ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

No Comments

Leave A Comment