Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕೃಷಿ ಸಂಸ್ಕøತಿ ತೌಳವ ಜೀವನ ಪದ್ಧತಿಯನ್ನು ನಿರೂಪಿಸುವುದೇ ಬಿಸುಕಣಿಯ ಮಹತ್ವ – ಕಲ್ಕೂರ


ಹಿಂದೆ ಕಳೆದು ಹೋದ ಸಂವತ್ಸರಗಳನ್ನು ಅವಲೋಕಿಸಿ ಮುಂದೆ ಬರುವ ಹೊಸ ಸಂವತ್ಸರವನ್ನು ಆತ್ಮ ವಿಮರ್ಶೆಯಿಂದ ಸಂಪದ್ಭರಿತಗೊಳಿಸುವ ಚಿಂತನೆಯೊಂದಿಗೆ ಕೃಷಿ ಸಂಸ್ಕøತಿಯ ಜೀವನ ಪದ್ಧತಿಯನ್ನು ನಿರೂಪಿಸುವುದು ಬಿಸು ಕಣಿಯ ಆಚರಣೆಯ ಸದುದ್ದೇಶವಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು.

ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳದ ‘ಮಂಜುಪ್ರಾಸಾದ’ ನಿಲಯದ ವಾದಿರಾಜ ಮಂಟಪದ ಪೇಜಾವರಶ್ರೀ ವೇದಿಕೆಯಲ್ಲಿ ಜರಗಿದ ‘ಬಿಸುಕಣಿ’ ಪಂಚಾಂಗ ಶ್ರವಣ ಸಮಾರಂಭದಲ್ಲಿ ಮತನಾಡಿದರು.

ವೇ|ಮೂ| ಡಾ. ಪ್ರಭಾಕರ ಅಡಿಗರು ಪಂಚಾಂಗ ಪೂಜೆ ಹಾಗೂ ಪಂಚಾಂಗ ಶ್ರವಣ ನಡೆಸಿಕೊಡುವ ಮೂಲಕ, ಶುಭಕೃತ್ ನಾಮ ಸಂವತ್ಸರದ ಫಲಾಫಲಗಳನ್ನು ವಿವರಿಸಿದರು. ಈ ಸಂವತ್ಸರದಲ್ಲಿ ಶನಿಯು ರಾಜನ ಸ್ಥಾನದಲ್ಲಿದ್ದು ಗುರು-ಮಂತ್ರಿಯ ಸ್ಥಾನದಲ್ಲಿರುವರು. ಉತ್ತಮ ಮಳೆ-ಬೆಳೆಯೊಂದಿಗೆ ಸಮೃದ್ಧಿಯ ಫಲವನ್ನು ಕಾಣಲಿದ್ದು ಸತ್ ಚಿಂತನೆಯೊಂದಿಗೆ ಮುನ್ನಡೆಯುವುದು ಅಗತ್ಯ ಎಂದರು.

ಶ್ರೀಮತಿ ಶಶಿಪ್ರಭಾ ಐತಾಳ್ ನೇತೃತ್ವದಲ್ಲಿ ಶ್ರೀಮುಖ್ಯಪ್ರಾಣ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನೆ, ಶ್ರೀ ರಘುರಾಮ ರಾವ್, ಲ್ಯಾಂಡ್‍ಲಿಂಕ್ಸ್ ಮತ್ತು ಬಳಗದಿಂದ ವಿಷ್ಣು ಸಹಸ್ರನಾಮ ಹಾಗೂ ರುದ್ರ ಪಾರಾಯಣ ನೆರವೇರಿತು.

ಶಿವಳ್ಳಿ ಸ್ಪಂದನದ ಗಣೇಶ್ ಹೆಬ್ಬಾರ್ ಕದ್ರಿ, ಸ್ವಸ್ತಿಕ್ ನ್ಯಾಷನಲ್ ಸ್ಕೂಲ್‍ನ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಎನ್., ಎಸ್.ಕೆ.ಡಿ.ಬಿ. ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ಪೊಳಲಿ ನಿತ್ಯಾನಂದ ಕಾರಂತ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಪೂರ್ಣಿಮಾ ರಾವ್ ಪೇಜಾವರ, ಕದ್ರಿ ರಾಮಚಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಕಲಾ ಪೋಷಕಿ, ಸಮಾಜ ಸೇವಕಿ ಯಶೋದಾ ರಾವ್ ಅವರನ್ನು ಪ್ರತಿಷ್ಠಾನದ ವತಿಯಿಂದ ಸ್ಮನಾನಿಸಲಾಯಿತು.

ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲ ದಯಾನಂದ ಕಟೀಲು, ಸನ್ಮಾನ ಪತ್ರ ವಾಚಿಸಿದರು.

ಕಲ್ಕೂರ ಪ್ರತಿಷ್ಠಾನದ ವಿಶ್ವಸ್ಥ ಕದ್ರಿ ನವನೀತ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವನೆಗೈದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಅಂಗಡಿಮಾರು ಕೃಷ್ಣಭಟ್ ರಚಿಸಿರುವ ತೌಳವ ಪಂಚಾಂಗ ಹಾಗೂ ಫಲವಸ್ತುಗಳನ್ನು ವಿತರಿಸಲಾಯ್ತು.

No Comments

Leave A Comment