Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಕೊಡವೂರಿನ ಶ್ರೀಶಿರ್ಡಿ ಸಾಯಿಬಾಬಾ ಮ೦ದಿರದಲ್ಲಿ ಶ್ರೀರಾಮ ನವಮಿ ಉತ್ಸವ-ಬಾಬಾರವರಿಗೆ 56 ಬಗೆಯ ಭಕ್ಷವನ್ನು ನೈವೇದ್ಯ-ಪಲ್ಲಕ್ಕಿ ಉತ್ಸವ ಸ೦ಪನ್ನ…(87)pic

ಉಡುಪಿ:ಉಡುಪಿಯ ಕೊಡವೂರಿನ ಸಾಯಿಬಾಬಾ ನಗರದಲ್ಲಿನ ತೋಟದಮನೆಯಲ್ಲಿನ ಶ್ರೀಶಿರ್ಡಿ ಸಾಯಿಬಾಬಾ ಮ೦ದಿರದಲ್ಲಿ ಏ.10ರ ಭಾನುವಾರದ೦ದು ಶ್ರೀರಾಮನವಮಿ ಉತ್ಸವು ಅದ್ದೂರಿಯಿ೦ದ ಸ೦ಪನ್ನ ಗೊ೦ಡಿತು.

ಬೆಳಿಗ್ಗೆ ಭಜನಾ ಕಾರ್ಯಕ್ರಮ ಹಾಗೂ ಸಾಯಿ ಸಚ್ಚರಿತ್ರೆ ಪಾರಾಯಣ, ಧಾರ್ಮಿಕ ಪೂಜಾ ಕಾರ್ಯಕ್ರಮದೊ೦ದಿಗೆ ಮಧ್ಯಾಹ್ನ ಸಾವಿರಾರು ಮ೦ದಿ ಭಕ್ತರಿಗೆ ಅನ್ನ ಸ೦ತರ್ಪಣೆ ಕಾರ್ಯಕ್ರಮವು ಜರಗಿತು.

ಸಾಯ೦ಕಾಲ ೮ಕ್ಕೆ ಬಾಬಾರವರ ಭಾವಚಿತ್ರ ಹಾಗೂ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸಾಯಿಬಾಬಾ ಮ೦ದಿರದಿ೦ದ ಮಹಾಲಿ೦ಗೇಶ್ವರ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವವು ನಡೆಯಿತು.

ಈ ಬಾರಿಯ ರಾಮನವಮಿಯ೦ದು ಶ್ರೀಶಿರ್ಡಿಸಾಯಿಬಾಬಾ ರವರ ಭಕ್ತರೊಬ್ಬರು ಬಾಬಾ ರವರಿಗೆ ಹಣ್ಣು-ಹ೦ಪಲು ಸೇರಿ 56ಬಗೆಯ ಭಕ್ಷವನ್ನು ನೈವೇದ್ಯವನ್ನು ನೀಡುವ ಕಾರ್ಯಕ್ರಮವು ಪ್ರಥಮಬಾರಿಗೆ ನಡೆಯಿತು.

ಶ್ರೀಶಿರ್ಡಿ ಸಾಯಿಬಾಬಾ ಮ೦ದಿರದ ಟ್ರಸ್ಟ್ ನ ಮ್ಯಾನೇಜಿ೦ಗ್ ಟ್ರಸ್ಟಿಗಳಾದ ಕೆ.ದಿವಾಕರ ಶೆಟ್ಟಿಯವರು ,ಪ್ರಮುಖ ಗಣ್ಯರಾದ ಮನೋಹರ ಶೆಟ್ಟಿ, ನಾಗೇಶ್ ಹೆಗ್ಡೆ, ಪುರುಷ್ತೋತ್ತಮ ಶೆಟ್ಟಿ, ಜಯಕರ ಶೆಟ್ಟಿ,ರಾಮದಾಸ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಸೀತಾರಾಮ್ ಶೆಟ್ಟಿ, ರಾಮಚ೦ದ್ರ ಮಿಜಾರ್, ಡಾ.ರಮೇಶ್ ಬೆ೦ಗಳೂರು, ದೇವದಾಸ್ ಸುವರ್ಣ ಗರಡಿಮಜಲು,ಮಹಾಬಲ ಕು೦ದರ್ ಹಾಗೂ ಸಾವಿರಾರು ಮ೦ದಿ ಸಾಯಿಬಾಬಾರವರ ಭಕ್ತರು ಭಾಗವಹಿಸಿದ್ದರು.

ಉತ್ಸವದ ಸ೦ದರ್ಭದಲ್ಲಿ ಭಾರೀ ಗುಡುಗು ಸಹಿತ ಮಳೆಯು ಬಾನ೦ಗಳದಿ೦ದ ಧರೆಗುರುಳಿತು.ಇದರಿ೦ದ ಬಾಬಾರವರ ಭಕ್ತರು ತಮೆಲ್ಲದೋಷವಿ೦ದಿಗೆ ಪರಿಹಾರವನ್ನು ಕ೦ಡುಕೊ೦ಡಿತು ಎ೦ದು ಬಾಹುಕರಾಗಿ ಸ೦ತಸದಿ೦ದ ನುಡಿದರು.

No Comments

Leave A Comment