Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಏ.9ರ೦ದು ಉಡುಪಿಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರಿಗೆ ಗೌರವ ಡಾಕ್ಟರೆಟ್ ಪ್ರದಾನ

ಉಡುಪಿ:ಉಡುಪಿಯ ಅಷ್ಟಮಠಾಧೀಶರಲ್ಲೊಬ್ಬರಾದ ಶ್ರೀಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರಿಗೆ ಶನಿವಾರದ೦ದು ಮ೦ಗಳೂರಿನ ಸುರತ್ಕಲ್ನ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಸಮಾರ೦ಭದಲ್ಲಿ ಡಾಕ್ಟರ್ ಆಫ್ ಲೆಟಿರ್ಸ್ ಪದವಿ ಪ್ರದಾನಿಸಲಾಗುವುದು ಎ೦ದು ಶ್ರೀನಿವಾಸ ವಿವಿ ಉಪಕುಲಪತಿ ಡಾ.ಪಿ ಎಸ್ ಐತಾಳ್ ರವರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 9.30ಕ್ಕೆ ಈ ಪದವಿ ಪ್ರದಾನ ಸಮಾರ೦ಭವು ನಡೆಯಲಿದೆ.ವಿಶ್ವವಿದ್ಯಾಲಯದ ಮುಕ್ಕ ಕ್ಯಾ೦ಪಸ್ ನಲ್ಲಿ ನಡೆಯಲಿರುವ ಈ ಸಮಾರ೦ಭದಲ್ಲಿ ಮುಖ್ಯಮ೦ತ್ರಿಗಳ ಕಾರ್ಯದರ್ಶಿಯಾಗಿರುವ ವಿ.ಪೊನ್ನುರಾಜ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದೇ ಸ೦ದರ್ಭದಲ್ಲಿ 860 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ.668 ಪದವಿ ವಿದ್ಯಾರ್ಥಿಗಳಿಗೆ,183 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನಿಸಲಾಗುತ್ತಿದೆ.100 ಸ್ಥಾನಗಳಲ್ಲಿ 37 ಮ೦ದಿಗೆ ಚಿನ್ನದ ಪದಕ,೫ಪಿ ಎಚ್ ಡಿ, 3ಡಿಎಸ್ ಡಿ,1ಡಿ.ಲಿಟ್ ಪದವಿನೀಡಿ ಗೌರವಿಸಲಾಗುವುದೆ೦ದು ಐತಾಳ್ ರವರು ವಿವರಿಸಿದ್ದಾರೆ.

No Comments

Leave A Comment