ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶ, ನಾಗಮಂಡಲೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಣೆ…
ಉಡುಪಿ: ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶ, ನಾಗಮಂಡಲೋತ್ಸವ ಅಂಗವಾಗಿ ಹೊರೆ ಕಾಣಿಕೆ ಮೆರವಣಿಗೆಗೆ ಉಡುಪಿ ಶ್ರೀಕೃಷ್ಣಮಠದ ಎದುರು ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಗುರುವಾರ ಚಾಲನೆ ನೀಡಿದರು.
ರಜತ ರಥದಲ್ಲಿ ನಾಗದೇವರ ಭಾವ ಚಿತ್ರ , ಬೇತಾಳ, ಡೊಳ್ಳು ಕುಣಿತ, ಕೀಲುಕುದುರೆ, ಹುಲಿವೇಷ, ಕರಗ, ಕೊಂಬು ವಾದ್ಯ, ಚೆಂಡೆ ವಾದನ ಸಹಿತ , ಕಳಶ ಹಿಡಿತ ಮಹಿಳೆಯರು , ರಜತ ಹಾಗೂ ಸ್ವರ್ಣ ಕಲಶವನ್ನುಹಾಗು ನೂರಾರು ವಾಹನಗಲ್ಲಿ ಹಸಿರುವಾಣಿ ಮೆರವಣಿಗೆಯಲ್ಲಿ ತರಲಾಯಿತು.
ಕಟೀಲು, ಪಡುಬಿದ್ರಿ ,ಕಾರ್ಕಳ , ಚಿಕ್ಕಮಂಗಳೂರು ಸಹಿತ ವಿವಿಧೆಡೆಯಿಂದ ವಾಹನಗಳಲ್ಲಿ ಹೊರೆ ಕಾಣಿಕೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಸಗ್ರಿ ಗೋಪಾಲಕೃಷ್ಣ ಸಾಮಗ , ಕಟೀಲು ಅಸ್ರಣ್ಣ ಸಹೋದರರು, ಎಸ್ ಪ್ರದೀಪ್ ಕಲ್ಕೂರ, ಹರಿಕೃಷ್ಣ ಪುನರೂರು, ಹರಿ ಉಡುಪ , ಭುವನಾಭಿರಾಮ ಉಡುಪ, ಶ್ರೀಪತಿ ಭಟ್ , ಸುಬ್ರಮಣ್ಯ ಭಟ್ , ಕೆ. ರಾಘವೇಂದ್ರ ಕಿಣಿ, ಸಗ್ರಿ ಅನಂತ ಸಾಮಗ, ಅಂಡಾರು ದೇವಿಪ್ರಸಾದ್ ಶೆಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು