Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಏ.10ಉಡುಪಿ ಕೊಡವೂರಿನ ಶ್ರೀಶಿರ್ಡಿ ಸಾಯಿಬಾಬಾ ಮ೦ದಿರದಲ್ಲಿ ಶ್ರೀರಾಮ ನವಮಿ ಉತ್ಸವ-ಬಾಬಾರವರಿಗೆ 56 ಬಗೆಯ ಭಕ್ಷವನ್ನು ನೈವೇದ್ಯ-ಪಲ್ಲಕ್ಕಿ ಉತ್ಸವ

ಉಡುಪಿ:ಉಡುಪಿಯ ಕೊಡವೂರಿನ ಸಾಯಿಬಾಬಾ ನಗರದಲ್ಲಿನ ತೋಟದಮನೆಯಲ್ಲಿನ ಶ್ರೀಶಿರ್ಡಿ ಸಾಯಿಬಾಬಾ ಮ೦ದಿರದಲ್ಲಿ ಏ.10ರ೦ದು ಶ್ರೀರಾಮ ನವಮಿ ಉತ್ಸವ ವನ್ನು ಹಮ್ಮಿಕೊಳ್ಳಲಾಗಿದೆ. ಅ೦ದು ಬೆಳಿಗ್ಗೆ ಭಜನಾ ಕಾರ್ಯಕ್ರಮ ಹಾಗೂ ಸಾಯಿ ಸಚ್ಚರಿತ್ರೆ ಪಾರಾಯಣ, ಧಾರ್ಮಿಕ ಪೂಜಾ ಕಾರ್ಯಕ್ರಮದೊ೦ದಿಗೆ ಮಧ್ಯಾಹ್ನ ಅನ್ನ ಸ೦ತರ್ಪಣೆ ಕಾರ್ಯಕ್ರಮವು ಜರಗಲಿದೆ ಎ೦ದು ಶ್ರೀಶಿರ್ಡಿ ಸಾಯಿಬಾಬಾ ಮ೦ದಿರದ ಟ್ರಸ್ಟ್ ನ ಮ್ಯಾನೇಜಿ೦ಗ್ ಟ್ರಸ್ಟಿಗಳಾದ ಕೆ.ದಿವಾಕರ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ೦ದು ಸಾಯ೦ಕಾಲ 7 ಗ೦ಟೆಗೆ ಬಾಬಾರವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಸಾಯಿಬಾಬಾ ಮ೦ದಿರದಿ೦ದ ಮೂಡಬೆಟ್ಟು ಜ೦ಕ್ಷನ್ ವರೆಗೆ ಪಲ್ಲಕ್ಕಿ ಉತ್ಸವವು ನಡೆಯಲಿದೆ,ಆ ಬಳಿಕ ಸಾ೦ಸ್ಕೃತಿಕ ಕಾರ್ಯಕ್ರಮವು ಜರಗಿದೆ.

ಈ ಬಾರಿಯ ರಾಮನವಮಿಯ೦ದು ಶ್ರೀಶಿರ್ಡಿಸಾಯಿಬಾಬಾ ರವರ ಭಕ್ತರೊಬ್ಬರು ಬಾಬಾ ರವರಿಗೆ ಹಣ್ಣು-ಹ೦ಪಲು ಸೇರಿ 56ಬಗೆಯ ಭಕ್ಷವನ್ನು ನೈವೇದ್ಯವನ್ನು ನೀಡುವ ಕಾರ್ಯಕ್ರಮವು ಪ್ರಥಮಬಾರಿಗೆ ನಡೆಯುತ್ತಿದೆ ಎ೦ದು ಅವರು ತಿಳಿಸಿದ್ದಾರೆ.
ಈ ಸ೦ದರ್ಭದಲ್ಲಿ ಮ೦ದಿರವನ್ನು ವಿದ್ಯುತ್ ದೀಪಾಲ೦ಕಾರ ಹಾಗೂ ಹೂವಿನ ಶೃ೦ಗರಿಸಲಾಗುತ್ತಿದೆ.

No Comments

Leave A Comment