Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಟೈಮಿಂಗ್ ವಿಚಾರದಲ್ಲಿ ಬಸ್ ನಿರ್ವಾಹಕರ ನಡುವೆ ಹೊಡೆದಾಟ

ಉಡುಪಿ : ನಗರದ ಸಿಟಿ ಬಸ್ಸ್ಟಾಂಡ್ ನಲ್ಲಿ  ಟೈಮಿಂಗ್ ವಿಷಯದಲ್ಲಿ ಕಂಡಕ್ಟರ್ ಗಳ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತದೆ.ಆದರೆ ಖಾಸಗಿ ಬಸ್ ನಿರ್ವಾಹಕರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.ಇಬ್ಬರು ಕಂಡಕ್ಟರ್ ಗಳು ಹಿಡೆದಾಟ ನಡೆಸುವ ದೃಶ್ಯ ಎಲ್ಲಾ ಕಡೆ ವೈರಲ್ ಆಗಿದೆ.

ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇವರಿಬ್ಬರು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.

ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್‌ಗಳ ಕಂಡಕ್ಟರ್‌ಗಳು ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ  ಜಾಲತಾಣಗಳಲ್ಲಿ ವ್ಯೆರಲ್ ಆಗುತ್ತಿದೆ.

ಆದರೆ ಇವರು ಹೊಡೆದಾಡುವಾಗ ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ.ಇವರ ಜಗಳ ಬಿಡಿಸಲು ಸ್ವಲ್ಪ ಹೊತ್ತು ಯಾರು ಹೋಗಿಲ್ಲ ಎಂದು ತಿಳಿದು ಬಂದಿದೆ.

No Comments

Leave A Comment