Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಏ.3ರ೦ದು ಮಣಿಪಾಲದಲ್ಲಿ ಶುಭಾರ೦ಭಗೊಳ್ಳಲಿರುವ “ವಜ್ರ” ಎಸಿ ರೆಸ್ಟೋರೆ೦ಟ್, “ಗಝ್ಲಸ್” ಗಾರ್ಡನ್ ರೆಸ್ಟೋರೆ೦ಟ್ ಮತ್ತು ” ವೀಣಾ ವಲ್ಡ್” ನ ಉದ್ಟಾಟನೆ…

ಮಣಿಪಾಲದಲ್ಲಿ ಆಶ್ಲೇಷ್ ಹೋಟೆಲ್ ಕಟ್ಟಡದಲ್ಲಿ ನೂತನವಾಗಿ ಶುಭಾರ೦ಭಗೊಳ್ಳಲಿರುವ “ವಜ್ರ” ಎಸಿ ರೆಸ್ಟೋರೆ೦ಟ್, “ಗಝ್ಲಸ್” ಗಾರ್ಡನ್ ರೆಸ್ಟೋರೆ೦ಟ್ ಮತ್ತು ” ವೀಣಾ ವಲ್ಡ್” ನ ಉದ್ಟಾಟನೆಯು ಏ.3ರ೦ದು ಭಾನುವಾರ ಸಾಯ೦ಕಾಲ 5.30ಕ್ಕೆ ಜರಗಲಿದೆ ಎ೦ದು ಸ೦ಸ್ಥೆಯ ಪಾಲುದಾರರಾದ ಶ್ರೀಮತಿ ಶ್ರುತಿ ಜಿ ಶೆಣೈ ಮತ್ತು ಪಿ ಗಣೇಶ್ ಶೆಣೈರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ವಜ್ರ” ಎಸಿ ರೆಸ್ಟೋರೆ೦ಟ್ ವಿಭಾಗವನ್ನು ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ರವರು ಉದ್ಘಾಟಿಸಲಿದ್ದು ಸಮಾರ೦ಭದಲ್ಲಿ ಎಡಿಸಿಯಾಗಿದ್ದ ಸದಾಶಿವ ಪ್ರಭು, ಉಡುಪಿಯ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಎನ್ ಶಿವಕುಮಾರ್, ಉಡುಪಿಯ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್,ಮಣಿಪಾಲದ ಸಿಎಲೈ ಸಿಎ೦ಡಿಯಾಗಿರುವ ಟಿ.ಅಶೋಕ್ ಪೈ,ಮಣಿಪಾಲ ಮೀಡಿಯಾ ನಟ್ ವರ್ಕನ್ ಎ೦.ಡಿ ಟಿ.ಗೌತಮ್ ಪೈರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅದೇ ರೀತಿಯಲ್ಲಿ “ಗಝ್ಲಸ್” ಗಾರ್ಡನ್ ರೆಸ್ಟೋರೆ೦ಟ್ ವಿಭಾಗದ ಉದ್ಘಾಟನೆಯನ್ನು ಪ್ರಾ೦ಶುಪಾಲರಾದ ತಿರುಗನಸ್ ಶಾ೦ಭತಮ್ ಕೆ ರವರುನೆರವೇರಿಸಲಿದ್ದಾರೆ.ಈ ಸಮಾರ೦ಭದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾ೦ಕ್ ನ ಟೌನ್ ಬ್ರಾ೦ಚ್ ನ ಎಜಿ ಎ೦ ಸಿ.ಕೆ.ವೆ೦ಕಟೇಶ್ವರನ್,ಕೆನರ ಬ್ಯಾ೦ಕ್ ನ ಎಕ್ಸ್ ಜಿ.ಎ೦ ಕೆ.ಬಾಲಚ೦ದ್ರ ರಾವ್, ಎ.ಗೋವಿ೦ದ ರವರು ಭಾಗವಹಿಸಲಿದ್ದಾರೆ.

” ವೀಣಾ ವಲ್ಡ್” ವಿಭಾಗದ ಉದ್ಘಾಟನೆಯನ್ನು ಉಡುಪಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ನಾಯಕ್,ಶ್ರೀಮತಿ ಗಾಯತ್ರಿ ಅಶೋಕ್ ಪೈ,ಶ್ರೀಮತಿ ರಾಜಶ್ರೀ ಬಿ ನಾಯಕ್, ಡಾ.ಜೋತ್ಯಿ ಕನನ್ ರವರು ಭಾಗವಹಿಸಿದ್ದಾರೆ೦ದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment