Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕನ್ನರ್ಪಾಡಿ ಶ್ರೀ ಜಯದುರ್ಗಾ ದೇವಸ್ಥಾನದ ಬ್ರಹ್ಮಕುಂಭಾಭಿಷೇಕ; ಹೊರಕಾಣಿಕೆ ಸಮರ್ಪಣೆ

ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಏ.10 ರ ತನಕ ನಡೆಯುವ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮ ಅಂಗವಾಗಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ಮೂಲಕ ಅಮ್ಮನ ಸನ್ನಿಧಾನಕ್ಕೆ ಹಸಿರು ಹೊರಕಾಣಿಕೆ ಸಮರ್ಪಿಸಲಾಯಿತು.
ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಡಾ. ರೋಶನ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.

ಊರ ಪರವೂರ ಭಕ್ತರು ವಾಹನಗಳಲ್ಲಿ ಅಕ್ಕಿ, ಬೇಳೆಕಾಳು, ಸಕ್ಕರೆ, ಬೆಲ್ಲ, ತುಪ್ಪ, ತೆಂಗಿನಕಾಯಿ ಅರ್ಪಿಸಿದರು.
ಪುರುಷರು, ಮಹಿಳಾ ತಂಡದ ಚಂಡೆವಾದನ, ಚಕ್ರತಾಳ ಹಿಡಿದ ಬಾಲಕಿಯರ ಕುಣಿತ, ಸಾಂಪ್ರದಾಯಿಕ ಡೋಲು ವಾದನ ಮೆರವಣಿಗೆಯ ಮೆರಗು ಹೆಚ್ಚಿಸಿತು.

ದೇವಳದ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ ಆಚಾರ್ಯ, ನಗರಸಭೆ ಸದಸ್ಯ ಅಮೃತಾ ಕೃಷ್ಣಮೂರ್ತಿ, ಸರದಿ ಅರ್ಚಕ ಗುರುರಾಜ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಮುರುಳೀಧರ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಸಂಜೀವ ಎಂ., ನಾರಾಯಣ ರಾವ್, ಉಪಾಧ್ಯಕ್ಷ ನವೀನ್ ಶೆಟ್ಟಿ, ನಿರುಪಮಾ ಪ್ರಸಾದ್  ಶೆಟ್ಟಿ, ಶ್ರೀಶ ತಂತ್ರಿ, ಜಯದುರ್ಗಾ ಪರಮೇಶ್ವರಿ ಯುವಕ ಮಂಡಳಿಯ ಉಮಾನಾಥ ಶೇರಿಗಾರ್ ಉಪಸ್ಥಿತರಿದ್ದರು.

No Comments

Leave A Comment