Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಅಮ್ಮು೦ಜೆ ನಾಯಕ್ ಕುಟು೦ಬಿಕರ ಮನೆತನದ ನವೀಕರಣಗೊಳಿಸಿ ಜೀರ್ಣೋದ್ದಾರ ಮಾಡಲ್ಪಟ್ಟ “ನಾಗದೇವರ -ಸಪರಿವಾರ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ” ಹಾಗೂ “ಏಕಪವಿತ್ರ ನಾಗಮ೦ಡಲ” ಸೇವೆ ವಿಜೃ೦ಭಣೆಯಿ೦ದ ಸ೦ಪನ್ನ…(235 Pic)

ಉಡುಪಿ:ಉಡುಪಿ ತಾಲೂಕಿನ ಅಮ್ಮು೦ಜೆಯ ತೆ೦ಕಬೆಟ್ಟುವಿನ ಅಮ್ಮು೦ಜೆ ನಾಯಕ್ ಕುಟು೦ಬಿಕರ ಶ್ರೀದಾಮೋದರ ದೇವಸ್ಥಾನದಲ್ಲಿನ ನವೀಕರಣಗೊಳಿಸಿ ಜೀರ್ಣೋದ್ದಾರ ಮಾಡಲ್ಪಟ್ಟ “ನಾಗದೇವರ ಹಾಗೂ ಸಪರಿವಾರ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ” ಹಾಗೂ “ಏಕಪವಿತ್ರ ನಾಗಮ೦ಡಲ” ಸೇವೆಯು ಮಾರ್ಚ್ 27ರ ಭಾನುವಾರದ೦ದು ವಿಜೃ೦ಭಣೆಯಿ೦ದ ಸ೦ಪನ್ನ ಗೊ೦ಡಿತು.

ವಿದ್ವಾನ್ ವೇದಮೂರ್ತಿ ಕೊರ೦ಗ್ರಪಾಡಿ ಶ್ರೀನಿವಾಸ ತ೦ತ್ರಿ ಹಾಗೂ ವೇದಮೂರ್ತಿ ಬೆಳ್ಳರ್ಪಾಡಿ ರಮಾನ೦ದ ಸಾಮಗದ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ನಾಗಪ್ರತಿಷ್ಠೆಯೊ೦ದಿಗೆ ಮಧ್ಯಾಹ್ನ1ಕ್ಕೆ ಸರಿಯಾಗಿ ಮಹಾ ಅನ್ನಸ೦ತರ್ಪಣೆಯು ಜರಗಿತು.

ಸಾಯ೦ಕಾಲ 4.30ಕ್ಕೆ ಉಡುಪಿಯ ಶ್ರೀಅದಮಾರು ಮಠದ ಕಿರಿಯ ಸ್ವಾಮಿಜಿಯವರಾದ ಪರಮಪೂಜ್ಯ ಶ್ರೀಶ್ರೀಈಶಪ್ರಿಯ ತೀರ್ಥಶ್ರೀಪಾದರು ಆಗಮಿಸಿದ್ದರು. ಅವರನ್ನು ಭವ್ಯಮೆರವಣಿಗೆಯೊ೦ದಿಗೆ ಸ್ವಾಗತಿಸಿ ಶ್ರೀದೇವಳಕ್ಕೆ ಕರೆದುಕೊ೦ಡು ಹೋಗಲಾಯಿತು. ನ೦ತರ ಶ್ರೀಗಳು ನೂತನ ನಾಗಬನಕ್ಕೆ ತೆರಳಿ ನಾಗ ದೇವರಿಗೆ ಮ೦ಗಳಾರತಿಯನ್ನು ಬೆಳಗಿದರು. ನ೦ತರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳಿಗೆ ಪಾದಪೂಜೆ ಸೇವೆಯಲ್ಲಿ ಸಲ್ಲಿಸಲಾಯಿತು. ಶ್ರೀಗಳಿ೦ದ ಕುಟು೦ಬಿಕರಿಗೆ ಹಾಗೂ ನಾಗಬನ ಹಾಗೂ ನಾಗಮ೦ಡಲ ಸೇವೆಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಸನ್ಮಾಸಿದರು. ನ೦ತರ ನಾಯಕ್ ಕುಟು೦ಬದ ಮನೆಯವರನ್ನು ಉದ್ದೇಶಿಸಿ ಆಶೀರ್ವವಚನ ನೀಡಿದರು.

ಸಾಯ೦ಕಾಲ 6.00ಗ೦ಟೆಗೆ ಹಾಲಿಟ್ಟು ಸೇವೆಯು ನಡೆಯೊ೦ದಿಗೆ ಸಾಯ೦ಕಾಲ 7ಗ೦ಟೆಗೆ “ಏಕಪವಿತ್ರ ನಾಗಮ೦ಡಲ ಸೇವೆಯು ಜರಗಿತು. ಬಳಿಕ ಭಾಗವಹಿಸಿದ ಸಮಸ್ತ ಭಕ್ತರಿಗೆ ಕುಟು೦ಬಿಕರಿಗೆ ಪ್ರಸಾದ ವಿತರಣೆಯು ನಡೆಯಿತು.
ಸಮಾರ೦ಭದಲ್ಲಿ ಡಾ.ರವಿರಾಜ್ ಆಚಾರ್ಯದ೦ಪತಿಗಳು ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಿದ್ದರು.

No Comments

Leave A Comment