Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಾ:28ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನಕ್ಕೆ ಧ್ವಜ ಸ್ತಂಭ(ಕೊಡಿ ಮರ)ಶೋಭಯಾತ್ರೆ

ಇದೇ ಬರುವ ತಾರೀಕು 28/03/2022 ಸೋಮವಾರ ಸಾಯಂಕಾಲ 4.30ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನಕ್ಕೆ ಧ್ವಜ ಸ್ತಂಭ(ಕೊಡಿ ಮರ)ಶೋಭಯಾತ್ರೆಯು ಬುಡ್ನಾರು 2 ನೇ ತಿರುವಿನ ನಿವಾಸಿಗರಾದ ದಿವಂಗತ.ಎಚ್. ವೇದವ್ಯಾಸ ಭಟ್ ರವರ ಧರ್ಮಪತ್ನಿ ಶ್ರೀಮತಿ ಮೋಹಿನಿ ಭಟ್ ಮತ್ತು ಅವರ ಮಕ್ಕಳು ಶ್ರೀ ಕ್ಷೇತ್ರಕ್ಕೆ ಉದಾರ ಕೊಡುಗೆಯಾಗಿ ನೀಡಿದ ಧ್ವಜ ಸ್ತಂಭ(ಕೊಡಿಮರ) ದ ಮೆರವಣಿಗೆಯ ಶೋಭಾಯಾತ್ರೆ ಸ್ವಗ್ರಹದಿಂದ ಪ್ರಾರಂಭವಾಗಿ ಪಣಿಯಾಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಆಗಮಿಸಲಿಕ್ಕಿದೆ.

ಈ ಶೋಭಾಯಾತ್ರೆಯಲ್ಲಿ ಸಮಸ್ತ ಗ್ರಾಮಸ್ಥರು, ಶ್ರೀದೇವರ ಪರಮಭಕ್ತರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ದೇವಳದ ಪ್ರಕಟಣೆಯಲ್ಲಿ ವಿನಂತಿಸಿಕೊ೦ಡಿದ್ದಾರೆ.

ವಿಶೇಷ ಸೂಚನೆ: ಪೂರ್ಣಕುಂಭ ಸ್ವಾಗತಕ್ಕೆ ಸೀರೆಯಲ್ಲಿ ಆಗಮಿಸುವ ಮಹಿಳೆಯರು ತಾವೇ ಕಲಶ ಮತ್ತು ತೆಂಗಿನಕಾಯಿ ತರಬೇಕಾಗಿ ವಿನಂತಿ.

No Comments

Leave A Comment