Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಬೆಂಗಳೂರು: ವಿದ್ಯುತ್ ಟ್ರಾನ್ಸ್​ಫಾರ್ಮರ್ ಸ್ಫೋಟದಿಂದಾಗಿ ತಂದೆ-ಮಗಳ ಸಾವು

ಬೆಂಗಳೂರು: ಇಲ್ಲಿನ ಮಂಗನಹಳ್ಳಿ ಬ್ರಿಡ್ಜ್ ಬಳಿ ಬೆಸ್ಕಾಂ ಸಂಸ್ಥೆಯ ಟ್ರಾನ್ಸ್​ಫಾರ್ಮರ್ ಸ್ಫೋಟಗೊಂಡು ತಂದೆ-ಮಗಳು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ್ ನಲ್ಲಿ ತಂದೆ ಮಗಳು ತೆರಳುತ್ತಿದ್ದಾಗ ಟ್ರಾನ್ಸ್​ಫಾರ್ಮರ್ ಸ್ಫೋಟಗೊಂಡಿತ್ತು. ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ 55 ವರ್ಷದ ಶಿವರಾಜ್ ಮೃತಪಟ್ಟಿದ್ದು 18 ವರ್ಷದ ಚೈತನ್ಯಾಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವಳು ಸಹ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಟ್ರಾನ್ಸ್​ಫಾರ್ಮರ್ ನಲ್ಲಿ ಸಮಸ್ಯೆ ಇದ್ದಿದ್ದಾಗಿ ಬೆಸ್ಕಾಂಗೆ ಕರೆ ಮಾಡಲಾಗಿತ್ತು. ಮೆಸೇಜ್ ಕೂಡ ಬಂದಿತ್ತು. ಆದರೆ ಯಾರೂ ಕೂಡ ರಿಪೇರಿ ಮಾಡಲು ಬಂದಿರಲಿಲ್ಲ. ಬೆಸ್ಕಾಂ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಮೃತ ಶಿವರಾಜ್ ಸ್ನೇಹಿತ ಅನಿಲ್ ಕುಮಾರ್ ಹೇಳಿದ್ದಾರೆ.

No Comments

Leave A Comment