Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ರಾಷ್ಟ್ರ ಕವಿ, ಮಂಜೇಶ್ವರ ಗೋವಿಂದ ಪೈಗಳದ್ದು ದೈತ್ಯ ಪ್ರತಿಭೆ – ಕಲ್ಕೂರ

ಲ್ಕೂರ ಪ್ರತಿಷ್ಠಾನದ ವತಿಯಿಂದ ಜರಗಿದ ರಾಷ್ಟ್ರ ಕವಿ, ಮಂಜೇಶ್ವರ ಗೋವಿಂದ ಪೈಗಳ 136ನೆಯ ಹುಟ್ಟುಹಬ್ಬದ ಅಂಗವಾಗಿ ಜರಗಿದ ರಾಷ್ಟ್ರ ಕವಿ ಗೋವಿಂದ ಪೈ ಹುಟ್ಟುಹಬ್ಬ ಸಂಸ್ಮರಣೆ ಸಾಹಿತ್ಯ ಅನುಸಂಧಾನ ಕಾರ್ಯಕ್ರಮವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ದೀಪ ಪ್ರಜ್ವಲನ ಗೊಳಿಸಿ ಉದ್ಘಾಟಿಸಿದರು.

ಗೋವಿಂದ ಪೈಗಳ ಅಸಾಧಾರಣ ಸಾಹಿತ್ಯ ಸೇವೆ, ಕೃತಿಗಳು ಮತ್ತು ಅವರ ಕನ್ನಡ ಪರ ಹೋರಾಟ ಯುವ ಪೀಳಿಗೆಗೆ ದಾರಿದೀಪವಾಗಬೇಕೆಂದು ಆಶಿಸಿದರು. ನಾಡಿಗೇ ಕೀರ್ತಿ ತಂದ ಇವರ ಸ್ಮರಣಾರ್ಥ ಮಂಗಳೂರು ಕೊಡಿಯಾಲ್‍ಬೈಲ್‍ನ ನವಭಾರತ ಗೋವಿಂದ ಪೈ ವೃತ್ತ ಅಭಿವೃದ್ಧಿ ಪಡಿಸಿ ಸುಂದರೀಕರಣ ಮಾಡುವುದರ ಜೊತೆಗೆ ಅವರ ಮೂರ್ತಿಯನ್ನು ಸ್ಥಾಪಿಸಿರುವುದು ಸ್ವಾಗತಾರ್ಹ, ಈ ದೆಶೆಯಲ್ಲಿ ಕಾರ್ಯಪ್ರವೃತ್ತರಾದ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆ ಮತ್ತು ಆಡಳಿತವರ್ಗ ಅಭಿನಂದನಾರ್ಹ ಎಂದು ನುಡಿದರು.

ಡಾ. ಎಂ. ಪ್ರಭಾಕರ ಜೋಶಿ ಅವರು ಏಸುವಿನ ಕೊನೆಯ ದಿನ, ಬುದ್ಧನ ಸಂದೇಶ ಮೊದಲಾದ ಉತ್ಕøಷ್ಟ ಮಟ್ಟದ ಕೃತಿಗಳನ್ನು ಉಲ್ಲೇಖಿಸಿ ಪೈಯವರ ಸಂಶೋಧನೆ ಮತ್ತು 25ಕ್ಕಿಂತಲೂ ಹೆಚ್ಚು ಭಾಷೆಯನ್ನು ಕರತಲಾಮಲಕ ಮಾಡಿಕೊಂಡ ಅವರ ಅದ್ಭುತ ಪ್ರತಿಭೆಯನ್ನು ಪ್ರಶಂಸಿಸಿ ನುಡಿನಮನ ಸಲ್ಲಿಸಿದರು.
ಪ್ರಸಂಗ ಸಾಹಿತಿ ನಿತ್ಯಾನಂದ ಕಾರಂತ ಪೊಳಲಿಯವರು ಆಕಾಲದಲ್ಲೆ ಪ್ರಾಸವನ್ನು ಬಿಟ್ಟು ಕಾವ್ಯ ರಚಿಸಿದ ಅವರ ದಿಟ್ಟತನವನ್ನು ಉಲ್ಲೇಖಿಸಿ ಗ್ರೀಕ್ ಭಾಷೆಯಲ್ಲಿ ಕನ್ನಡ ಶಬ್ಧ ಹಾಗೂ ಇತಿಹಾಸ ಶಾಸನಗಳ ಸಂಶೋಧನೆಯಲ್ಲಿ ಅವರ ಸಾಟಿ ಇಲ್ಲದ ಸಾಧನೆಯನ್ನು ವಿವರಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಶ್ರೀ ಗುರುದತ್ತ್ ಬಂಟ್ವಾಳಕರ್ ಇವರು ಪೈಯವರ ಸಾಹಿತ್ಯ ಸೇವೆಯನ್ನು ಎಳೆಎಳೆಯಾಗಿ ನಿರೂಪಿಸುತ್ತಾ ರಾಷ್ಟ್ರಾಭಿಮಾನದ ದೆಶೆಯಲ್ಲಿ ಭಾಷಾಭಿಮಾನದ ಅವರ ಕಾರ್ಯವೈಖರಿಯನ್ನು ಪ್ರಶಂಶಿಸಿದರು.

ಗೋವಿಂದ ಪೈಗಳ ಕಾವ್ಯ ಮತ್ತು ಸಾಹಿತ್ಯ ಹೈಸ್ಕೂಲ್ ಮತ್ತು ಕಾಲೇಜು ಪಠ್ಯ ಪುಸ್ತಕಗಳಲ್ಲಿ ಪಠ್ಯ ಕ್ರಮವಾಗಿ ಮೂಡಿಬರಬೇಕೆಂದು

ಸರಕಾರವನ್ನು ಒತ್ತಾಯಿಸುವ ಠರಾವನ್ನು ಸಭೆ ಅಂಗೀರಿಸಿತು.ಗಡಿನಾಡು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಸ್ವರಚಿತ ಕವನವನ್ನು ವಾಚಿಸಿದರು.

ಕೂಟ ಮಹಾಜಗತ್ತು ಅಧ್ಯಕ್ಷರಾದ ಚಂದ್ರಶೇಖರ ಮಯ್ಯ, ಮಂಜೇಶ್ವರದ ಸಾಮಾಜಿಕ ಧುರೀಣ ಗೋಪಾಲ ಶೆಟ್ಟಿ ಅರಿಬೈಲು, ಗೆಳೆಯರ ಬಳಗ ಸಾಲಿಗ್ರಾಮದ ತಾರಾನಾಥ ಹೊಳ್ಳ, ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ಬುಲ್ ರಹಿಮಾನ್ ಸುಬ್ಬಯಕಟ್ಟೆ, ವಾಗೀಶ್ವರೀ ಯಕ್ಷಗಾನ ಮಂಡಳಿಯ ಸಂಜಯ ಕುಮಾರ್, ಮಂಗಳೂರು ತಾಲೂಕು ಕಸಾಪ ಅಧ್ಯಕ್ಷರಾದ ಮಂಜುನಾಥ ರೇವಣ್‍ಕರ್, ಸುಖಾಲಾಕ್ಷಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಡಾ. ಮಂಜುಳಾ ಶೆಟ್ಟಿಯವರು ಸ್ವಾಗತಿಸಿ ಸಭಾ ನಿರ್ವಹಣೆ ಗೈದರು. ಶ್ರೀಮತಿ ವಿಜಯ ಲಕ್ಷ್ಮೀ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು.

No Comments

Leave A Comment