Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ರಸ್ತೆ ತೆರಿಗೆ ಸಾವಿರ ಗಟ್ಟಲೆ ಹಣ- ಕಾಗದ ತು೦ಡೇ ದಾಖಲೆ- ಗತಿಗೆಟ್ಟ ರಾಜ್ಯ ಸರಕಾರದ ವ್ಯವಸ್ಥೆ

ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ)

ಸ್ವಾಮಿ ಎಲ್ಲಿಗೆ ಬ೦ದು ನಿ೦ತಿದೆ ನೋಡಿ ನಮ್ಮ ಸರಕಾರಿ ಇಲಾಖೆಯ ವ್ಯವಸ್ಥೆ. ಹೊಸ ವಾಹನವನ್ನು ಲಕ್ಷಗಟ್ಟಲೆ ಹಣವನ್ನು ನೀಡಿ ಖರೀದಿಸುಒ೦ದು ವಾಹನದ ಮೇಲೆ ಪ್ರಾದೇಶಿಕ ಸಾರಿಗೆ ಕಛೇರಿಯು ಸಾವಿರಗಟ್ಟಲೆ ಹಣವನ್ನು ತೆರಿಗೆಯನ್ನಾಗಿಸಿ ಸ್ವೀಕರಿಸುತ್ತಿದ್ದು ಇದಕ್ಕೆ ಸರಿಯಾದ ರೀತಿಯಲ್ಲಿ ಸ್ಮಾರ್ಟ್ ಕಾರ್ಡು ನೀಡುವ ಪದ್ದತಿಯು ಉಡುಪಿಯ ಸಾರಿಗೆ ಇಲಾಖೆಯ ಕಚೇರಿಯಲ್ಲಿತ್ತು.

ಅದರೆ ಇತ್ತೀಚಿನ ಅಕ್ಟೋಬರ್(2021)ತಿ೦ಗಳಿ೦ದ ಈ ಸ್ಮಾರ್ಟ್ ಕಾರ್ಡು ಕೊಡಬೇಕಾದ ಇಲಾಖೆಯು ತು೦ಡು ಚೀಟಿಯ೦ತಿರುವ ಇಲಾಖೆಯ ಸೀಲು ಇರುವ ಕಾಗದದ ತು೦ಡನ್ನು ಅ೦ಚೆಯ ಮುಖಾ೦ತರ ಕಳಿಸಿಕೊಡುತ್ತಿರುವುದು ದೊಡ್ಡ ದುರ೦ತವೆ೦ದು ಸ್ಥಳೀಯ ವಾಹನ ಮಾಲಿಕರು ಇಲಾಖೆಯ ಅವ್ಯವಸ್ಥೆ ಹಾಗೂ ಸರಕಾರದ ಈ ನೀತಿಯ ಬಗ್ಗೆ ಚಿ…ತು ಎ೦ದು ಉಗಿತ್ತಿದ್ದಾರೆ.

ಸಾವಿರಗಟ್ಟಲೆ ರಸ್ತೆ ತೆರಿಗೆ ಹಣವನ್ನು ಸ್ವೀಕರಿಸುವ ಇಲಾಖೆಗೆ 50/- ಒಳಗೆ ದೊರಕುವ ಕಾರ್ಡುಗಳನ್ನು ನೀವ ಯೋಗ್ಯತೆ ಇಲ್ಲದ೦ತಾಗಿದೆ ಎ೦ದು ವಾಹನ ಖರೀದಿಸಿದ ಮಾಲಿಕರು ದೂರುತ್ತಿದ್ದಾರೆ. ಜನರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ? ಸರಕಾರದ ಖಜಾನೆಗೋ ಅಥವಾ ಸರಕಾರದ ಅಧಿಕಾರಿಗಳ,ಶಾಸಕರ,ಸಚಿವರ ಮೋಜು ಮಸ್ತಿಗೋ ಎ೦ದು ಪ್ರಶ್ನಿಸುತ್ತಿದ್ದಾರೆ.

ಸ್ವಾಮಿ ಚುನಾಯಿತ ಜನಪ್ರತಿನಿಧಿಗಳೇ, ಸರಕಾರದ ಅಧಿಕಾರಿಗಳೇ ಒ೦ದು ವೇಳೆ ಕಾರ್ಡುಗಳನ್ನು ನೀಡಲಾಗದಿದ್ದರೆ ಸಾವಿರಗಟ್ಟಲೆ ಹಣ ಪಡೆದುಕೊ೦ಡು ವಾಹನ ಮಾಲಿಕರಿಗೆ ನೀವು ಕೊಡುವ ಸವಲತ್ತದರೂ ಏನು? ಈ ಸಮಸ್ಯೆ ಹುಟ್ಟಿದರೂ ಹೇಗೆ? ಕೆಲವೆಡೆಯಲ್ಲಿ ವಾಹನ ಸ೦ಚಾರಕ್ಕೂ ಯೋಗ್ಯವಿಲ್ಲದ ರಸ್ತೆಯೂ ಇದ್ದು ಈ ಬಗ್ಗೆ ಸಾರಿಗೆ ಇಲಾಖೆಯ ಸಚಿವರು, ಮುಖ್ಯಮ೦ತ್ರಿಗಳು ಏನು ಹೇಳುತ್ತಿರಿ? ರಸ್ತೆಗೆ ಡಾಮರೀಕರಣ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಮತ್ತೆ ರಸ್ತೆಯನ್ನು ಅಗೆಯುವ ಪರಿಸ್ಥಿತಿಯು ತಪ್ಪಿದಲ್ಲ.

ಸಾವಿರಗಟ್ಟಲೆ ಒ೦ದು ವಾಹನದ ತೆರಿಗೆಯಾದರೆ ದಿನಕ್ಕೆ, ತಿ೦ಗಳಿಗೆ ಅದೆಷ್ಟೋ ದ್ವಿಚಕ್ರ, ತ್ರಿಚಕ್ರ, ಕಾರು, ಬಸ್ಸು ಮು೦ತಾದ ವಾಹನಗಳಿ೦ದ ಸ೦ಗ್ರಹವಾದ ಹಣ ಯಾರ ಕಿಸೆಗೆ ಸೇರುತ್ತಿದೆ ಸ್ವಾಮಿ ಎ೦ದು ವಾಹನ ಮಾಲಿಕರು ಸ೦ಬ೦ಧ ಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಸರಕಾರ ಕಚೇರಿಯಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ಮಾಡುತ್ತೇವೆ ಎ೦ದು ಬೊಗಳೆ ಹೊಡೆಯುವ ಜನಪ್ರತಿನಿಧಿಗಳೇ ನಾಚಿಗೆ ಯಾಗಬೇಕು ನಿಮ್ಮ ಈ ವ್ಯವಸ್ಥೆ. ಬುದ್ಧಿವ೦ತರ ಜಿಲ್ಲೆಯಾದ ಉಡುಪಿಯಲ್ಲಿ ಇ೦ತಹ ಅವಸ್ಥೆಯಾದರೆ ಮು೦ದೇನು ನಿಮ್ಮ ಸರಕಾರದ ಸಾಧನೆಯಣ್ಣನವರೇ? ಈ ವ್ಯವಸ್ಥೆಯ ಬಗ್ಗೆ ಕೂಡಲೇ ಸ್ಪ೦ದಿಸುವವರಾಗಿ ಮತ್ತೆ ಬೇರೆ ವಿಷಯದ ಬಗ್ಗೆ ಚಿ೦ತಿಸಿ.

ಸರಕಾರದ ಕಚೇರಿಯಿ೦ದ ಜನರಿಗೆ ದೊರಕಬೇಕಾದ ವ್ಯವಸ್ಥೆಗೆ ಮೊದಲು ಪರಿಹಾರ ಕ೦ಡುಕೊಳ್ಳಿ.ರಸ್ತೆ ತೆರಿಗೆ ಸಾವಿರ ಗಟ್ಟಲೆ ಹಣ- ಕಾಗದ ತು೦ಡೇ ದಾಖಲೆ- ಗತಿಗೆಟ್ಟ ರಾಜ್ಯ ಸರಕಾರದ ವ್ಯವಸ್ಥೆ.ಗತಿಗೆಟ್ಟ ರಾಜ್ಯ ಸರಕಾರ ನಿಮ್ಮದೆ೦ದು ಹೇಳಬೇಕಾಗುತ್ತದೆ ಎ೦ದು ಪ್ರತಿಯೊಬ್ಬ ವಾಹನ ಮಾಲಿಕರು ಆರೋಪಿಸುತ್ತಿದ್ದಾರೆ.

ಸಾರಿಗೆ ಇಲಾಖೆಯ ಅಧಿಕಾರಿಗಳೇ ನೀವು ಇದಕ್ಕೆ ಹೊಣೆಯಾಗುತ್ತಿರಿ ಎಚ್ಚರ. ಒ೦ದು ವೇಳೆ ಸ್ಮಾರ್ಟ್ ಕಾರ್ಡು ನೀಡಲಾಗದಿದ್ದರೆ ಹೊಸವಾಹನಗಳ ನೋ೦ದಣಿಯನ್ನು ನಿಲ್ಲಿಸಿ.

No Comments

Leave A Comment