ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಸ್ ಪಲ್ಟಿಯಾಗಿ 5 ಮಂದಿ ಮೃತ್ಯು : 7 ಮಂದಿ ಗಂಭೀರ
ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಣವಿಕಲ್ಲು ಗ್ರಾಮದ ಬಳಿ,ಹೊಸಪೇಟೆ ಯಿಂದ ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ಬೆಳಗಿನ ಜಾವ2ಗಂಟೆ ಸಮಯದಲ್ಲಿ ಟ್ರ್ಯಾಕ್ಸ್ ಪಲ್ಟಿಯಾಗಿದೆ.ಅದರ
ಪರಿಣಾಮ ಟ್ರ್ಯಾಕ್ಸ್ ನಲ್ಲಿದ್ದ 3ಜನರು ಪ್ರಾರಂಭದಲ್ಲಿ ಮೃತಪಟ್ಟಿದ್ದು, ನಂತರ ಮೃತರ ಸಂಖ್ಯೆ 5ಕ್ಕೇರಿದೆ ಎಂದು ತಿಳಿದು ಬಂದಿದೆ. ಉಳಿದ 7 ಜನರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬದಿದೆ.
ಇವರು ವಿಜಾಪುರ ಜಿಲ್ಲೆ ನಿಡಗುಂದಿ ಗ್ರಾಮದವರಾಗಿದ್ದು, ತಮಿಳು ನಾಡಿನ ರಾಮೇಶ್ವರ ಕ್ಷೇತ್ರಕ್ಕೆ ತೆರಳಿದ್ದರೆನ್ನಲಾಗಿದೆ.
ವಾಹನ ಚಾಲಕ ವಾಹನವನ್ನು ಅತಿವೇಗವಾಗಿ ಚಲಾಯಿಸುತ್ತಿದ್ದು,ವಾಹನ ರಸ್ತೆಯ ಮದ್ಯದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ರಸ್ಥೆಯ ಬದಿಗೆ ಪಲ್ಟಿ ಹೊಡೆದಿದೆ ಎನ್ನಲಾಗಿದೆ.