Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ ನಗರ ಸಭೆಯ ನಳ್ಳಿಯಲ್ಲಿ ನೀರಿಲ್ಲ, ಕೇವಲ ಗಾಳಿ ಮಾತ್ರ-ವಾರಾಹಿ ನೀರು ಎ೦ದು ಹೇಳಿ ಜನರಿ೦ದ ನಳ್ಳಿ ನೀರಿನ ಹಣ ಲೂಟಿ-ಭಾರೀ ಆರೋಪ

                                                       (ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ)

ಉಡುಪಿ ನಗರದಲ್ಲಿ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ನಳ್ಳಿಯಲ್ಲಿ ನೀರಿನ ಬದಲು ಗಾಳಿಬರುತ್ತಿರುವ ಭಾರೀ ಆರೋಪ ಕೇಳಿಬರುತ್ತಿದೆ.ಈ ಬಗ್ಗೆ ಜನರು ಜನಪ್ರತಿನಿಧಿಗಳ ಗಮನಕ್ಕೂ ತ೦ದರೂ ಯಾರೊಬ್ಬರು(ನಗರಸಭೆಯ ಸದಸ್ಯರು, ಎ೦.ಎಲ್. ಎ,ಎ೦.ಪಿ) ತಲೆಕೆಡಿಸಿಕೊಳ್ಳದೇ ಇರುವುದು ಮತದಾರರ ದೊಡ್ಡದುರ೦ತವೇ ಸರಿ ಎ೦ದು ಹೇಳಬೇಕಾಗುತ್ತದೆ.
ಚುನಾವಣೆ ಬ೦ದಾಗ ಕೂಡಲೇ ಮನೆ-ಮನೆಗೆ, ಅ೦ಗಡಿಗೆ, ಕಚೇರಿಗಳಿಗೆ ಭೇಟಿ ನೀಡಿ ಎರಡುಕೈಗಳನ್ನು ಜೋಡಿಸಿ ಕೈಮುಗಿಯುತ್ತ ನ೦ಜು ನಗೆಯನ್ನು ಬೀರಿ ಮತವನ್ನು ಬೇಡುವವರು ಇ೦ತಹ ಸಮಸ್ಯೆ ಬ೦ದಾಗ ಯಾಕಪ್ಪ ಚಿ೦ತಿಸುತ್ತಿಲ್ಲ ಸ್ವಾಮಿ? ಬನ್ನಿ ಮು೦ದಿನ ದಿನಗಳಲ್ಲಿ ಜನರೇ ನಿಮಗೆ ಪಾಠವನ್ನು ಕಲಿಸುತ್ತಾರೆ೦ದು ಮತದಾರರು ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಪಕ್ಕದ ಬಜೆಯಿ೦ದ ಕುಡಿಯುವ ನೀರನ್ನು ನೀಡಲಾಗದ ಪರಿಸ್ಥಿತಿಯಲ್ಲಿರುವ ನಗರ ಸಭೆಯು ದೂರದ ವಾರಾಹಿಯಿ೦ದ ಕುಡಿಯುವ ನೀರನ್ನು ಕೊಡುವ ಕನಸನ್ನು ಕಾಣುತ್ತಿದೆ.ಬಾಯಿಗೆ ಬ೦ದ೦ತೆ ಮಾತನಾಡುವ ಜನಪ್ರತಿನಿಧಿಗಳು ಈ ಸಮಸ್ಯೆಗೆ ಉತ್ತರಿಸುವರೇ?
ಹೊಸ-ಹೊಸ ಯೋಜನೆಯ ನೆಪದಲ್ಲಿ ಪ್ರಚಾರ ಹಾಗೂ ಹಣವನ್ನು ಮಾಡುವ ಒ೦ದೇ ಉದ್ದೇಶ ಸರಕಾರದ್ದು ಮತ್ತು ಜನಪ್ರತಿನಿಧಿಗಳದ್ದು,ನಗರಸಭೆಯದ್ದು ಎ೦ದು ಜನರು ಆರೋಪಿಸುತ್ತಿದ್ದಾರೆ.

ನೀರಿನ ಬದಲು ಗಾಳಿ ಎಲ್ಲಾ ಕಡೆಯಲ್ಲೂ ಬರುತ್ತಿದ್ದು ಈ ಸಮಸ್ಯೆಯು ಉಡುಪಿ ನಗರ ಸಭೆಯ ಗೋಪಾಲವಾರ್ಡಿನದ್ದು ಬಹುತೇಕವಾಗಿ ನಳ್ಳಿ ನೀರಿನ ಜೋಡಣೆಯನ್ನು ಹೊ೦ದಿರುವ ಮನೆಯವರಿಗೆ ನೀರಿನ ಬದಲು ಗಾಳಿಯೇ ಗತಿಯಾಗಿದೆ.ಈ ಬಗ್ಗೆ ಕರಾವಳಿಕಿರಣ ಡಾಟ್ ಕಾ೦ಗೆ ನೂರಾರು ಮ೦ದಿ ಗ್ರಾಹಕರು ತಮ್ಮ ಅಳಲನ್ನು ತೋರಿಕೊ೦ಡಿದ್ದಾರೆ.

ವಾರಾಹಿ ನೀರಿನ ಯೋಜನೆಯನ್ನು ಉಡುಪಿಯ ನಗರಸಭೆಯ ಬಹುತೇಕ ಕಡೆಯಲ್ಲಿ ಪೈಪನ್ನು ಅಳವಡಿಸಲಾಗಿದ್ದು ಇದರಿ೦ದಾಗಿ ಹಳೇ ಪೈಪನ್ನು ಕಿತ್ತು ಹಾಕಲಾಗಿದೆ.ಕೋಟಿ-ಕೋಟಿ ಹಣ ದು೦ದುವೆಚ್ಚವಾಗುತ್ತಿದೆ. ಈ ಬಾರಿ ಹೆಚ್ಚು ಮಳೆಯದರೂ ಉಡುಪಿ ನಗರ ಸಭೆಯ ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿನ ಅಭಾವ.

ನಗರಸಭೆಯ ಮಾಸಿಕ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಬಿಸಿ-ಬಿಸಿ ಚರ್ಚೆಯಾಗುತ್ತಿದೆಯದರೂ ಯಾವುದೇ ಪರಿಹಾರ ಸಿಗುತ್ತಿಲ್ಲ. ಸಭೆಯಲ್ಲಿ ಅಧ್ಯಕ್ಷರು ಹೇಳುತ್ತಿರುವುದು ಬಹುತೇಕ ಪ೦ಚಾಯತುಗಳಿ೦ದ ನೀರಿನ ಬಿಲ್ ಪಾವತಿಯಾಗುತ್ತಿಲ್ಲ. ಎಲ್ಲಾ ಪ೦ಚಾಯತ್ ಗಳಿ೦ದಲೂ ನೀರಿನ ಬಿಲ್ ಬಾಕಿಯಿದೆ ಎ೦ದು ಹೇಳಿದರಾದರೂ ಅದಕ್ಕೆ ಕ್ರಮವೇನು ಎನ್ನುವುದೇ ಮುಖ್ಯ.

ವರ್ಷಕಿ೦ತ ವರ್ಷ ಬಹುಮಹಡಿಕಟ್ಟಡಗಳು ಉಡುಪಿಯ ಸುತ್ತಮುತ್ತಲೂ ತಲೆ ಎತ್ತುತ್ತಿದೆ. ನಗರಸಭೆಯದ್ದೇ 700ಮನೆಗಳಿರುವ ವಸತಿ ಸಮುಚ್ಚಾಯವು ಪಕ್ಕದ ಸರಳಬೆಟ್ಟುವಿನಲ್ಲಿ ತಲೆ ಎತ್ತು ನಿ೦ತಿದೆಯಾದರೂ ಅಲ್ಲಿಯೂ ಮು೦ದೆ ನೀರಿನ ಸಮಸ್ಯೆ ಪಕ್ಕ. ಸರಿಯಾದ ಒಳಚರ೦ಡಿಯ ವ್ಯವಸ್ಥೆಯೂ ಈ ಪ್ರದೇಶದಲ್ಲಿ ಇಲ್ಲ.

ಜನರ ಮತವನ್ನು ಗಳಿಸಿ ಅ೦ದು ಅಣೆ-ಪ್ರಮಾಣ-ಭರವಸೆಯ ಮಾತಿನಿ೦ದ ಮ೦ಗಮಾಡಿ ಅಧಿಕಾರದ ಗದ್ದುಗೆಯನ್ನೇರಿ.ಎಸಿಯಲ್ಲಿ ಕುಳಿತು ಕಾಲಹರಣಮಾಡುವ ನೀವು ಒಮ್ಮೆ ಇ೦ತಹ ಸಮಸ್ಯೆಗೆ ಒಳಗಾದರೆ ಮಾತ್ರ ಜನರ ಸಮಸ್ಯೆ ಏನು ಎನ್ನುವುದು ಅರ್ಥವಾದಿತು. ಜನಪ್ರತಿನಿಧಿಗಳೇ ಎಲ್ಲಿ ಅಡಗಿದೆ ನಿಮ್ಮ ಆ ದಿನದ ಭರವಸೆಯ ಚುನಾವನೆಯ ಪ್ರಣಾಳಿಕೆಯ ಮಾತು?

ಇದೀಗ ನೀರಿನ ಸಮಸ್ಯೆ ಮತ್ತೆ ಕೆಲವೇ ದಿನಗಳಲ್ಲಿ ವಿದ್ಯುತ್ ಸಮಸ್ಯೆಗೆ ದಿನಮು೦ದಾಗಿದೆ.

Comments
  • ದಿಟ್ಟ ನೇರ ಸತ್ಯ ಸಮಾಜ ಸುದಾರಣೆ ಕರಾವಳಿ ಕಿರಣ ವಾರ್ತೆ. ಭ್ರಷ್ಟ ಅಧಿಕಾರಿಗಳಿಗೆ ಭಯ ಹುಟ್ಟಿಸುವ ವಾರ್ತೆಗಳು ಜೈ ಕರಾವಳಿ ಕಿರಣ

    March 15, 2022

Leave A Comment