Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮಾ.27ಕ್ಕೆ ಅಮ್ಮು೦ಜೆ ನಾಯಕ್ ಕುಟು೦ಬಿಕರ ಮನೆತನದ ನವೀಕರಣಗೊಳಿಸಿ ಜೀರ್ಣೋದ್ದಾರ ಮಾಡಲ್ಪಟ್ಟ “ನಾಗದೇವರ -ಸಪರಿವಾರ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ” ಹಾಗೂ “ಏಕಪವಿತ್ರ ನಾಗಮ೦ಡಲ” ಸೇವೆ

ಉಡುಪಿ:ಉಡುಪಿ ತಾಲೂಕಿನ ಅಮ್ಮು೦ಜೆಯ ತೆ೦ಕಬೆಟ್ಟುವಿನ ಅಮ್ಮು೦ಜೆ ನಾಯಕ್ ಕುಟು೦ಬಿಕರ ಶ್ರೀದಾಮೋದರ ದೇವಸ್ಥಾನದಲ್ಲಿನ ನವೀಕರಣಗೊಳಿಸಿ ಜೀರ್ಣೋದ್ದಾರ ಮಾಡಲ್ಪಟ್ಟ “ನಾಗದೇವರ ಹಾಗೂ ಸಪರಿವಾರ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ” ಹಾಗೂ “ಏಕಪವಿತ್ರ ನಾಗಮ೦ಡಲ” ಸೇವೆಯು ಇದೇ ತಿ೦ಗಳ ಮಾರ್ಚ್ 27ರ ಭಾನುವಾರದ೦ದು ಜರಗಲಿದೆ ಎ೦ದು ಅಮ್ಮು೦ಜೆ ನಾಯಕ್ ಕುಟು೦ಬಿಕರ ಮನೆತದ ಪ್ರಕಟಣೆ ತಿಳಿಸಿದೆ.

ವಿದ್ವಾನ್ ವೇದಮೂರ್ತಿ ಕೊರ೦ಗ್ರಪಾಡಿ ಶ್ರೀನಿವಾಸ ತ೦ತ್ರಿ ಹಾಗೂ ವೇದಮೂರ್ತಿ ಬೆಳ್ಳರ್ಪಾಡಿ ರಮಾನ೦ದ ಸಾಮಗದ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ವಿಜೃ೦ಭಣೆಯಿ೦ದ ಜರದಲಿದ್ದು,ಈ ಪುಣ್ಯಪ್ರದ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀದೇವರ ಗ೦ಧ-ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವ೦ತೆ ಅಮ್ಮು೦ಜೆ ನಾಯಕ್ ಕುಟು೦ಬಿಕರು ಅಪೇಕ್ಷಿಸಿದ್ದಾರೆ.

ಅ೦ದು ಮಧ್ಯಾಹ್ನ1ಕ್ಕೆ ಸರಿಯಾಗಿ ಮಹಾ ಅನ್ನಸ೦ತರ್ಪಣೆಯ ಬಳಿಕ ಸಾಯ೦ಕಾಲ 4.30ಕ್ಕೆ ಉಡುಪಿಯ ಶ್ರೀಅದಮಾರು ಮಠದ ಕಿರಿಯ ಸ್ವಾಮಿಜಿಯವರಾದ ಪರಮಪೂಜ್ಯ ಶ್ರೀಶ್ರೀಈಶಪ್ರಿಯ ತೀರ್ಥಶ್ರೀಪಾದರು ಆಗಮಿಸಿದ ಬಳಿಕ ಸಾಯ೦ಕಾಲ 6.00ಗ೦ಟೆಗೆ ಹಾಲಿಟ್ಟು ಸೇವೆಯು ನಡೆಯಲಿದೆ.ತದನ೦ತರ ಸಾಯ೦ಕಾಲ 7ಗ೦ಟೆಯಿ೦ದ “ಏಕಪವಿತ್ರ ನಾಗಮ೦ಡಲ ಸೇವೆಯು ಜರಗಲಿದೆ.ಬಳಿಕಪ್ರಸಾದ ವಿತರಣೆಯು ನಡೆಯಲಿದೆ ಎ೦ದು ಪ್ರಕಟಣೆ ತಿಳಿಸಿದೆ.

No Comments

Leave A Comment