Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಆತಂಕ: ಕೊನೆಗೂ ಸುಮಿ ಸೇರಿ 4 ಜಿಲ್ಲೆಗಳಲ್ಲಿ ರಷ್ಯಾದಿಂದ ಕದನ ವಿರಾಮ ಘೋಷಣೆ!

ಕೀವ್: ಉಕ್ರೇನ್-ರಷ್ಯಾ ಸಂಘರ್ಷ ಚಾಲ್ತಿಯಲ್ಲಿರುವಂತೆಯೇ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತ ಜಾಗತಿಕ ಆತಂಕ ಹೆಚ್ಚಾಗಿರುವಂತೆಯೇ ಇತ್ತ ರಷ್ಯಾ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕಾಗಿ ಸುಮಿ ಸೇರಿದಂತೆ ಉಕ್ರೇನ್ ನ 4 ಜಿಲ್ಲೆಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ.

ರಷ್ಯಾ ಸರ್ಕಾದ ಮೂಲಗಳ ಪ್ರಕಾರ ಉಕ್ರೇನ್ ರಾಜಧಾನಿ ಕೀವ್, ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್ ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ಒದಗಿಸಲು ಉಕ್ರೇನ್‌ನಲ್ಲಿ ಬೆಳಿಗ್ಗೆ 10 ರಿಂದ (ಮಾಸ್ಕೋ ಸಮಯ) ನಡೆಯುತ್ತಿರುವ ಸಂಘರ್ಷದ ಮಧ್ಯೆ ರಷ್ಯಾ ಮಂಗಳವಾರ ಕದನ ವಿರಾಮವನ್ನು ಘೋಷಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ಬೆಲಾರಸ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಮೂರನೇ ಸುತ್ತಿನ ಮಾತುಕತೆ ವಿಫಲವಾದ ನಂತರ ಈ ಬೆಳವಣಿಗೆ ನಡೆದಿದೆ. ಸಭೆಯಲ್ಲಿ, ಎರಡೂ ದೇಶಗಳ ನಾಗರಿಕರ ಸ್ಥಳಾಂತರಿಸುವಿಕೆಯ ಸಮಸ್ಯೆಗಳನ್ನು ಪ್ರಸ್ತಾಪಿಸಿದರು ಮತ್ತು ಉಕ್ರೇನಿಯನ್ ಸೇನೆಯು ಮಂಗಳವಾರದಿಂದ ಮಾನವೀಯ ಕಾರಿಡಾರ್ ಕೆಲಸ ಮಾಡಲು ಪ್ರಾರಂಭಿಸುತ್ತಾರೆ ಎಂದು ರಷ್ಯಾಕ್ಕೆ ಭರವಸೆ ನೀಡಿತ್ತು ಎನ್ನಲಾಗಿದೆ.

ಮಾರ್ಚ್ 8, 2022 ರಂದು ಬೆಳಿಗ್ಗೆ 10:00 ಗಂಟೆಯಿಂದ (ಮಾಸ್ಕೋ ಸಮಯ) ರಷ್ಯಾ ಸೇನೆ ಕದನ ವಿರಾಮವನ್ನು ಘೋಷಿಸುತ್ತದೆ ಮತ್ತು ಮಾನವೀಯ ಕಾರಿಡಾರ್‌ಗಳನ್ನು ಒದಗಿಸಲು ಸಿದ್ಧವಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೊರಡಿಸಿದೆ. ಅಂತೆಯೇ ಈ ಹೇಳಿಕೆಯಲ್ಲಿ ಮಾನವೀಯ ಕಾರಿಡಾರ್‌ಗಳ ಹೆಚ್ಚಿನ ವಿವರಗಳನ್ನು ನೀಡುತ್ತದೆ. ನಾಗರಿಕರ ಸ್ಥಳಾಂತರಿಸುವಿಕೆಗಾಗಿ ಕೀವ್, ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್ ನಗರಗಳಲ್ಲಿ ಕಾರಿಡಾರ್ ರಚಿಸಲಾಗಿದೆ ಎಂದು ಹೇಳಿದೆ.

ಮಾರ್ಚ್ 8, 2022 ರಂದು 03:00 ಕ್ಕೆ (ಮಾಸ್ಕೋ ಸಮಯ) ಮೊದಲು ಯೋಜಿತ ಮಾನವೀಯ ಕಾರ್ಯಾಚರಣೆಯ ಬಗ್ಗೆ ಸ್ಥಾಪಿತ ಕಾರ್ಯವಿಧಾನಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ಪ್ರಸ್ತಾವಿತ ಮಾನವೀಯ ಕಾರಿಡಾರ್‌ಗಳ ಲಿಖಿತ ಅನುಮೋದನೆಯನ್ನು ಪಡೆಯುವಾಗ ಉಕ್ರೇನಿಯನ್ ಕಡೆಯವರು ತಿಳಿಸಬೇಕು ಮತ್ತು ಉಕ್ರೇನ್‌ನಿಂದ ಮತ್ತು ಉಕ್ರೇನಿಯನ್ ಅಧಿಕಾರಿಗಳಿಂದ ಮಾನವೀಯ ಕಾರ್ಯಾಚರಣೆಗಳ ಘೋಷಿತ ಮಾರ್ಗಗಳಲ್ಲಿ ಭದ್ರತೆಯ ಖಾತರಿಗಳು ಮುಖ್ಯ ಎಂದೂ ರಷ್ಯಾ ಹೇಳಿದೆ.

No Comments

Leave A Comment