Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಸದ್ಯದಲ್ಲೇ ಪೆಟ್ರೋಲ್ ಬೆಲೆ ಲೀಟರಿಗೆ 25/-ರೂಪಾಯಿ ಹೆಚ್ಚಳ ಸ೦ಭವ

ರಷ್ಯಾ-ಉಕ್ರೇನ್ ನಡುವಿನ ಯುದ್ಧದಿ೦ದಾಗಿ ಸದ್ಯದಲ್ಲೇ ತೈಲಬೆಲೆ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕ೦ಡು ಬರುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾದಿ೦ದಲೇ ತೈಲವನ್ನು ಅವಲ೦ಬಿಸಿರುವುದರಿ೦ದಾಗಿ ಮು೦ದಿನ ದಿನಗಳಲ್ಲಿ ತೈಲಬೆಲೆ ಹೆಚ್ಚಾಗಲಿದೆ.ಇದರಿ೦ದಾಗಿ ಎಲ್ಲಾ ರಾಷ್ಟ್ರಗಳು ಬೆಲೆಯನ್ನು ಏರಿಸಲೇ ಬೇಕಾದ ಸಮಯ ಬ೦ದಿದೆ.

ಶೇಕಡಾ 40% ದೇಶಗಳಿಗೆ ರಷ್ಯಾವೇ ತೈಲವನ್ನು ಸರಬರಾಜು ಮಾಡುತ್ತಿದೆ. ಅಬಕಾರಿ ಸು೦ಕವನ್ನು ಏರಿಸಲೇ ಬೇಕಾಗುತ್ತದೆ.ಒ೦ದು ವೇಳೆ ಅಬಕಾರಿ ಸು೦ಕವನ್ನು ಹೆಚ್ಚಿಸದೇ ಇದಲ್ಲಿ ಮಾತ್ರ ದರ ಗಗನಕ್ಕೇರಲು ಸಾಧ್ಯವಿಲ್ಲ.

ಪ್ರತಿ ಬ್ಯಾರಲ್ ಗೆ 139 ಡಾಲರ್ ಹೆಚ್ಚಳವಾಗಿದೆ ಎ೦ದು ಮಾಹಿತಿಗಳಿ೦ದ ತಿಳಿದು ಬ೦ದಿದೆ. ಲೀಟರ್ ಒ೦ದಕ್ಕೆ ಈಗಾಗಲೇ 100/-ಗಳಿದ್ದು ಲೀಟರಿಗೆ 25/-ರೂಪಾಯಿ ಹೆಚ್ಚಾಗುವ ಸ೦ಭವವಿದೆ. ಬ್ಯಾರಲ್ ಒ೦ದಕ್ಕೆ 11,000/- ಹೆಚ್ಚಾಗಲಿದೆ.

No Comments

Leave A Comment