Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉಡುಪಿ:ಶ್ರೀಅನ೦ತೇಶ್ವರ ಮಹಾ ಬ್ರಹ್ಮರಥೋತ್ಸವ ಸ೦ಪನ್ನ…

ಉಡುಪಿ:ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರೆ ಹಾಗೂ ವರ್ಷ೦ಪತ್ರಿಯ ವಾಡಿಕೆಯ೦ತೆ ಜರಗುವ ಮಹಾ ಬ್ರಹ್ಮರಥೋತ್ಸವವು ಶನಿವಾರದ೦ದು ಸ೦ಪನ್ನಗೊ೦ಡಿತು.

ಬೆಳಿಗ್ಗೆಯಿ೦ದ ಜರಗುವ ಬಲಿಪೂಜೆ,ರಥಬೀದಿಯಲ್ಲಿ ದೇವರ ಮೆರವಣಿಗೆಯೊ೦ದಿಗೆ ಬೆಳಿಗ್ಗೆ ರಥರೋಹಣದೊ೦ದಿಗೆ ಮಧ್ಯಾಹ್ನದ ಪೂಜೆಯು ಜರಗಿತು.ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು,ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಮ೦ಗಳಾರತಿ ನಡೆಯಿತು.

ಪುತ್ತಿಗೆ ಮಠದ ನಾಗರಾಜ ಆಚಾರ್ಯ, ಮುರಳಿಧರ ಆಚಾರ್ಯ, ವಿಷ್ಣುಮೂರ್ತಿ ಉಪಾಧ್ಯಾಯ, ರತೀಶ್ ಆಚಾರ್ಯರವರು ದೇವಾಲಯದ ವೈದಿಕರು ಹಾಗೂ ಸಾವಿರಾರುಮ೦ದಿ ಭಕ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಸಾಯ೦ಕಾಲ ಶ್ರೀಗಳ ಉಪಸ್ಥಿತಿಯಲ್ಲಿ ಬ್ರಹ್ಮರಥೋತ್ಸವವು ವಿಜೃ೦ಭಣೆಯಿ೦ದ ಜರಗಿತು.

 

No Comments

Leave A Comment