Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮೊದಲ ಸ್ವದೇಶಿ ತರಬೇತಿ ವಿಮಾನ ‘ಹಂಸ’ ಯಶಸ್ವಿ ಹಾರಾಟ

ಬೆಂಗಳೂರು: ಭಾರತದ ಮೊದಲ ಸ್ವದೇಶಿ ತರಬೇತಿ ವಿಮಾನ ‘ಹಂಸ ಎನ್‌ಜಿ’ಯ ಸಮುದ್ರದ ಮೇಲಿನ ಹಾರಾಟ ಪರೀಕ್ಷೆ ಯಶಸ್ವಿಯಾಗಿದ್ದು, ದೇಶದ ರಕ್ಷಣಾತ್ಮಕತೆಗೆ ಮತ್ತಷ್ಟು ಬಲ ಬಂದಂತಾಗಿದೆ.

ಹಂಸ ಎನ್‌ಜಿ ವಿಮಾನವು ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದ್ದು, ವಾಣಿಜ್ಯ ಬಳಕೆಗೆ ಅವಕಾಶ ಪಡೆಯುವ ಅಂತಿಮ ಹಂತಕ್ಕೆ ಇದೀಗ ಬಂದು ನಿಂತಿದೆ.

ಇನ್ನು ಪುದುಚೇರಿಯ ಕಡಲ ಮೇಲೆ ಈ ಪ್ರಯೋಗಾರ್ಥ ಹಾರಾಟ ನಡೆದಿದ್ದು, 140 ನಾಟಿಕಲ್ ಮೈಲಿ ಅಂತರವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿದೆ.

ಈ ಸಂದರ್ಭದಲ್ಲಿ ವಿಮಾನ ಏರುವ, ಇಳಿಯುವ, ನೆಲ ಸ್ಪರ್ಶಿಸುವ, ವಿಮಾನ ಸಂರಚನೆಯ ಪ್ರದರ್ಶನ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗಿದೆ ಎಂದು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ ಮಾಹಿತಿ ನೀಡಿದೆ.

No Comments

Leave A Comment