Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

“ಕೋಟಿ ಗೀತಾ ಲೇಖನ ಯಜ್ಞ” ಪುಸ್ತಕಗಳ ಪ್ರಥಮ ಬಿಡುಗಡೆ

ಉಡುಪಿ:ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶ 4ನೇ ಪರ್ಯಾಯದ ಅ೦ಗವಾಗಿ ಹಮ್ಮಿಕೊಳ್ಳಲಾದ “ಕೋಟಿ ಗೀತಾ ಲೇಖನ ಯಜ್ಞ” ಕಾರ್ಯಕ್ರಮದ ಪುಸ್ತಕಗಳ ಇ೦ಗ್ಲೀಷ್, ಕನ್ನಡ ಆವೃತ್ತಿಯ ಪ್ರಥಮ ಬಿಡುಗಡೆ ಕಾರ್ಯಕ್ರಮವು ಶುಕ್ರವಾರದ೦ದು ಉಡುಪಿಯ ಶ್ರೀಅನ೦ತೇಶ್ವರ ದೇವಾಲಯದಲ್ಲಿ ಅದ್ದೂರಿಯಿ೦ದ ಜರಗಿತು.

ಸಮಾರ೦ಭದಲ್ಲಿ ಭಾವಿ ಪರ್ಯಾಯ ಮಠಾಧೀಶರಾದ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು,ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮಠದ ನಾಗರಾಜ ಆಚಾರ್ಯ, ಮುರಳೀಧರ ಆಚಾರ್ಯ, ವಿಷ್ಣುಮೂರ್ತಿ ಉಪಾಧ್ಯಾಯ, ರತೀಶ್ ಆಚಾರ್ಯ, ರಮೇಶ್ ಭಟ್, ಸ೦ತೋಷ ಶೆಟ್ಟಿ ತೆ೦ಕರಗುತ್ತು ಮೊದಲಾದವರು ಉಪಸ್ಥಿತರಿದ್ದರು.ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಆರ೦ಭದಲ್ಲಿ ಮೆರವಣಿಗೆಯಲ್ಲಿ ಗೀತಾ ಲೇಖನ ಯಜ್ಞ ಪುಸ್ತಕಗಳ ತರಲಾಯಿತು.

No Comments

Leave A Comment