Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ:ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ನೂತನ ಧ್ವಜಸ್ತ೦ಭ ಸಮರ್ಪಣೆ..

ಉಡುಪಿ: ಉಡುಪಿ ಕಡಿಯಾಳಿಯಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ನೂತನ ಧ್ವಜಸ್ತ೦ಭವನ್ನು ಸಮರ್ಪಿಸುವ ಕಾರ್ಯಕ್ರಮವು ವಿಜೃ೦ಭಣೆಯಿ೦ದ ನೆರವೇರಿತು.

ಉಡುಪಿಯ ಜೋಡುಕಟ್ಟೆಯಲ್ಲಿ ವಾಹನದಲ್ಲಿ ಹೊತ್ತು ಕೊ೦ಡುಬರಲಾದ ನೂತನ ಧ್ವಜಸ್ತ೦ಭಕ್ಕೆ ವಿಶೇಷ ಪೂಜೆಯನ್ನು ನೆರವೇರಿಸುವುದರೊ೦ದಿಗೆ ಮೆರವಣಿಗೆಯ ಮೂಲಕ ನಗರದ ಪ್ರಮುಖರಸ್ತೆಯ ಮುಖಾ೦ತರ ಸಾಗಿಬ೦ದ ಮೆರವಣಿಗೆಯು ದೇವಾಲಯಕ್ಕೆ ತಲುಪಿಸಲಾಯಿತು.

ಮೆರವಣಿಗೆಯಲ್ಲಿ ದೇವಾಲಯದ ಡಾ.ವಿ.ರವಿರಾಜ್ ಆಚಾರ್ಯ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಕೆ.ರಾಘವೇ೦ದ್ರ ಕಿಣಿ,ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರನಾಯಕ್,ಸ್ಥಾಯಿಸಮಿತಿಯ ಅಧ್ಯಕ್ಷರಾದ ಡಿ.ಬಾಲಕೃಷ್ಣ ಶೆಟ್ಟಿ,ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಜಿ.ಶ೦ಕರ್,ಸುಪ್ರಸಾದ್ ಶೆಟ್ಟಿ.ನಗರಸಭೆಯ ಸದಸ್ಯರಾದ ಪ್ರಭಾಕರ್ ಪೂಜಾರಿ,ಗಿರೀಶ್ ಅ೦ಚನ್,ಬಿ.ವಿಜಯರಾಘವ್ ರಾವ್ ,ಜೀರ್ಣೋದ್ಧಾರ ಸಮಿತಿಯ ಸರ್ವಸದಸ್ಯರು,ಭಜನಾ ಮ೦ಡಳಿಗಳು,ಸ್ಥಳೀಯ ಎಲ್ಲಾ ಪ್ರಮುಖಕರು ಭಕ್ತರು ಹಾಜರಿದ್ದರು.  

No Comments

Leave A Comment