ಉಡುಪಿ:ಮಹತೋಭಾರ ಶ್ರೀ ಅನಂತೇಶ್ವರ,ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ರಜತಕವಚ ಸಮರ್ಪಣೆ
ಉಡುಪಿ:ರಜತ ಪೀಠಪುರಾಧಿಪತಿ ಶ್ರೀ ಅನಂತಾಸನ ದೇವರ ಪಾಣಿಪೀಠಕ್ಕೆ ಹಾಗೂ ಉಡುಪೀಶ ಶ್ರೀ ಚಂದ್ರಮೌಳೀಶ್ವರ ದೇವರ ಪಾಣಿಪೀಠಕ್ಕೆ ಜೋಡು ದೇವಾಲಯಗಳ ಆಡಳಿತ ಮುಕ್ತೇಸರರಾದ ಮತ್ತು ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಷಷ್ಟ್ಯಬ್ದಪೂರ್ತಿ ಪ್ರಯುಕ್ತ ಶ್ರೀ ಅನಂತೇಶ್ವರ ದೇವರ ಮಹಾರಥೋತ್ಸವದ ಸಂದರ್ಭದಲ್ಲಿ ಶ್ರೀಶ್ರೀಗಳವರ ವೈಯಕ್ತಿಕ ಸೇವಾರೂಪವಾಗಿ ರಥಬೀದಿಯಲ್ಲಿ ಮೆರವಣಿಗೆಯೊಂದಿಗೆ, 15 ಲಕ್ಷ ರೂಪಾಯಿ ವೆಚ್ಚದ ರಜತಕವಚವನ್ನು ಗುರುವಾರದ೦ದು ಸಮರ್ಪಣೆಯನ್ನುಮಾಡಿದರು.
ಆರ೦ಭದಲ್ಲಿ ಉಡುಪಿಯ ರಥಬೀದಿಯಲ್ಲಿರುವ ಪುತ್ತಿಗೆ ಮಠದಲ್ಲಿನ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ರಜತಕವಚವನ್ನು ನಡುಚಪ್ಪರದಲ್ಲಿರಿಸಿ ಪುತ್ತಿಗೆ ಮಠಾಧೀಶರಾದ ಶ್ರೀಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹೂವಿನಹಾರವನ್ನು ಹಾಕಿದ ಬಳಿಕ ವಿಶೇಷ ಮೆರವಣಿಗೆಯನ್ನು ರಥಬೀದಿಯ ಸುತ್ತಲೂ ನಡೆಸಲಾಯಿತು.
ಮೆರವಣಿಗೆಯಲ್ಲಿ ಭಜನಾ ತ೦ಡಗಳು, ವೇದಘೋಷ, ತಟ್ಟಿರಾಯ, ವಾದ್ಯತ೦ಡಗಳ ಸದಸ್ಯರು ಭಾಗವಹಿಸಿದ್ದರು. ಶ್ರೀ ಅನಂತಾಸನ ದೇವರ ಪಾಣಿಪೀಠಕ್ಕೆ ಹಾಗೂ ಉಡುಪೀಶ ಶ್ರೀ ಚಂದ್ರಮೌಳೀಶ್ವರದ ನಾಗರಾಜ ಆಚಾರ್ಯ,ವಿಷ್ಣುಮೂರ್ತಿ ಉಪಾಧ್ಯಾಯ, ರತೀಶ್ ಆಚಾರ್ಯ, ರಮೇಶ್ ಭಟ್, ಸಗ್ರಿ ಗೋಪಾಲ ಆಚಾರ್ಯ ಸೇರಿದ೦ತೆ ದೇವಳದ ಅರ್ಚಕರು ಸೇರಿದ೦ತೆ ಭಕ್ತರು ಅಪಾರ ಸ೦ಖ್ಯೆಯಲ್ಲಿ ಉಪಸ್ಥಿತರಿದ್ದರು.