BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಅವಕಾಶದ ಸದ್ಭಳಕೆ ಪೂರ್ಣ ಮಟ್ಟದಾಗಲಿ- ಶ್ರೀಸುಗುಣೇಂದ್ರ ತೀರ್ಥರು

ಉಡುಪಿ: ದೇವರು ಹೆಚ್ಚು ಶ್ರಮಕ್ಕೆ ಹೆಚ್ಚು ಫಲವನ್ನು ನೀಡುತ್ತಾರೆ, ಅನೇಕ ತೊ೦ದರೆಗಳು ಬ೦ದಾಗ ಕೆಲಸಕಾರ್ಯಗಳು ನಿಧಾನವಾಗುವುದು ಸಹಜ ಎ೦ದು ಪುತ್ತಿಗೆ ಮಠಾಧೀಸರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ನುಡಿದರು.

ಅವರು ಮ೦ಗಳವಾರದ೦ದು ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಾಶೋತ್ಸವ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅನುಗ್ರಹ ಸಂದೇಶದಲ್ಲಿ ನೆರೆದ ಸದ್ಭಕ್ತರಿಗೆ ದೇವಾಲಯ ಕಾಮಗಾರಿ ನಿಗದಿತ ಸಮಯದಲ್ಲಿ ಸಂಪೂರ್ಣ ಗೊಳಿಸುವ ಬಗ್ಗೆ ಆತ್ಮ ವಿಶ್ವಾಸ ಮೂಡಿಸಿ, ನಮ್ಮ ನಿತ್ಯ ಜೀವನದಲ್ಲಿ ಬ್ರಹ್ಮಕಲಶದಂತಹ ಯೋಗ ಭಾಗ್ಯದ ಧಾರ್ಮಿಕೋತ್ಸವದ ಅವಕಾಶದಲ್ಲಿ ಸಂಪೂರ್ಣ ವಾಗಿ ನಿಮ್ಮನ್ನು ತೊಡಗಿಸಿಕೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಿ ಎಂದು ಕರೆ ನೀಡಿದರು.

ಆಡಳಿತ ಮಂಡಳಿಯ ಪರವಾಗಿ ಮುರಳೀಧರ ಆಚಾರ್ಯ ಹಾಗೂ ನಾಗರಾಜ್ ಆಚಾರ್ಯ ರವರು ಮೇ 1ರಿಂದ -7 ರ ತನಕದ ಕಾರ್ಯಕ್ರಮದ ರೂಪುರೇಖೆ, ಸಲಹಾ ಸೂಚನೆ ಸಭೆಯಲ್ಲಿ ಮ೦ಡಿಸಿದರು

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎ೦.ವಿಶ್ವ ನಾಥ ಭಟ್, ಸೂರಾಲು ನಾರಾಯಣ ಮಡಿ, ಸದಸ್ಯರು ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿಜಯರಾಘವ ರಾವ್ ಸ್ವಾಗತಿಸಿ, ವಿಧ್ವಾನ್ ಗೋಪಲಾಚಾರ್ಯರವರು ದೇವಸ್ತುತಿ ಹಾಡಿದರು, ಪದ್ಮಾಕ್ಷೀ ಯವರ ಪ್ರಾರ್ಥನೆ ಗೈದರು, ಕೆ.ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ, ವಿಠ್ಠಲಮೂರ್ತಿ ಆಚಾರ್ಯರವರ ವಂದನಾರ್ಪಣೆಗೈದರು.

No Comments

Leave A Comment