Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಉಕ್ರೇನ್ ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ: ಕೂಡಲೇ ಆ ಕಟ್ಟಡಗಳ ತೊರೆಯುವಂತೆ ಜನತೆಗೆ ಅಧಿಕಾರಿಗಳ ಸೂಚನೆ

ಉಕ್ರೇನ್: ಉಕ್ರೇನ್‌ನೊಂದಿಗೆ ರಷ್ಯಾ ನಡೆಸುತ್ತಿರುವ ಕ್ರೂರ ವರ್ತನೆಗೆ ಟೀಕೆಗಳು ಪ್ರಪಂಚದಾದ್ಯಂತ ಕೇಳಿಬರುತ್ತಿವೆ. ಉಕ್ರೇನ್ ವಿರುದ್ದ ರಷ್ಯಾ ನಡೆದುಕೊಳ್ಳುತ್ತಿರುವ ರೀತಿಗೆ ರಷ್ಯಾದ ಜನರೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಉಕ್ರೇನ್ ಸೈನ್ಯವನ್ನು ಗುರಿಯಾಗಿಸಿ ರಷ್ಯಾ ಪಡೆಗಳು ದಾಳಿ ನಡೆಸಲು ಮುಂದಾಗಿದ್ದರು ಆದರೀಗ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಸಾರ್ವಜನಿಕರು ವಾಸಿಸುವ ವಸತಿ ಪ್ರದೇಶಗಳನ್ನೂ ಗುರಿಯಾಗಿಸಿಕೊಂಡಿದ್ದಾರೆ.

ಉಕ್ರೇನ್‌ನಲ್ಲಿ ವಸತಿ ಪ್ರದೇಶಗಳಲ್ಲಿ ಕೆಲವು ಕೆಂಪು ಗುರುತುಗಳು ಕಾಣುತ್ತಿದೆ. ದಾಳಿಗಳನ್ನು ನಡೆಸಲು ರಷ್ಯಾದ ಪಡೆಗಳು ಈ ಚಿಹ್ನೆಗಳನ್ನು ಬಳಸಿದವು ಎಂದು ಕೆಲವರು ಹೇಳುತ್ತಾರೆ. ಕಟ್ಟಡದ ಮೇಲ್ಭಾಗದಲ್ಲಿ x ಚಿಹ್ನೆಗಳ ಆಕಾರದಲ್ಲಿ ಗುರುತುಗಳು ಕಾಣುತ್ತಿದೆ.ಅದರಲ್ಲೂ ಅವು ಕೆಂಪು ಬಣ್ಣದಲ್ಲಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಈ ಚಿಹ್ನೆಗಳನ್ನ ಯಾರು ಬರೆದರು ಎಂಬುದು ಅನಮಾನಕ್ಕೆ ಕಾರಣವಾಗಿದೆ.

ಕೆಂಪು ಬಣ್ಣದ ಚಿಹ್ನೆಗಳು ಇದ್ದಕ್ಕಿದ್ದಂತೆ ಬೆಳಕಿಗೆ ಬಂದಿರುವುದರಿಂದ ಉಕ್ರೇನಿಯನ್ ಅಧಿಕಾರಿಗಳು ಗಾಬರಿಗೊಂಡಿದ್ದಾರೆ. ವಸತಿ ಗೃಹಗಳ ಮೇಲ್ಭಾಗದಲ್ಲಿ ಕೆಂಪು ಗುರುತುಗಳಿದ್ದರೆ, ಕಟ್ಟಡದ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಿಸಲು ಆದೇಶಿಸಲಾಗಿದೆ. ಉಕ್ರೇನ್ ಅಧಿಕಾರಿಗಳು ತಮ್ಮ ಕಟ್ಟಡಗಳನ್ನು ಕೂಡಲೆ ಪರಿಶೀಲಿಸುವಂತೆ ಮತ್ತು x ಗುರುತು ಕಂಡು ಬಂದರೆ ಆ ಕಟ್ಟಡವನ್ನ ತೊರೆಯುವಂತೆ ತಿಳಿಸಿದ್ದೇವೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment