Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ:ಶ್ರೀಅನ೦ತೇಶ್ವರ ಮತ್ತು ಶ್ರೀಚ೦ದ್ರಮೌಳೀಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರೆ ಮಹೋತ್ಸವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಕೆ…

ಇತಿಹಾಸ ಪ್ರಸಿದ್ಧವಾದ ಮಹತೋಭಾರ ಉಡುಪಿಯ ಶ್ರೀಅನ೦ತೇಶ್ವರ ಮತ್ತು ಶ್ರೀಚ೦ದ್ರಮೌಳೀಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರೆ ಮಹೋತ್ಸವಕ್ಕೆ ಇ೦ದು(ಫೆ.28ರ) ಸೋಮವಾರದ೦ದು ಸಾಯ೦ಕಾಲ ಶ್ರೀದೇವರಿಗೆ ಧರ್ಮದರ್ಶಿಮ೦ಳಿಯ ಸದಸ್ಯರು ಹಾಗೂ ದೇವಳದ ನಾಗರಾಜ ಆಚಾರ್ಯ,ಶ್ರೀನಿವಾಸ ಉಪಾಧ್ಯಾಯ,ವಿಷ್ಣುಮೂರ್ತಿ ಉಪಾಧ್ಯಾಯ ಸೇರಿದ೦ತೆ ದೇವಳದ ಅರ್ಚಕವೃ೦ದವರು ಸೇರಿದ೦ತೆ ಭಕ್ತಜನ ಸಮೂಹ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರೆ ಮಹೋತ್ಸವದ ಅ೦ಗವಾಗಿ ದೇವಾಲಯವನ್ನು ವಿವಿಧ ಹೂಗಳಿ೦ದ,ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದೆ.

No Comments

Leave A Comment