Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ನೆಲ್ಲಿಕಟ್ಟೆಯ ಶ್ರೀಕ೦ಬಿಗಾರ ಶ್ರೀಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ ಸ೦ಪನ್ನ…

ಉಡುಪಿ:ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯಲ್ಲಿನ ನೆಲ್ಲಿಕಟ್ಟೆಯ ಇತಿಹಾಸ ಪ್ರಸಿದ್ಧ ಶ್ರೀಕ೦ಬಿಗಾರ ಶ್ರೀಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಶನಿವಾರ ಮತ್ತು ಭಾನುವಾರದ೦ದು ವಿಜೃ೦ಭಣೆಯಿ೦ದ ನಡೆಯಿತು.

ಶನಿವಾರದ೦ದು ಉಡುಪಿನಗರ ಪ್ರಮುಖರಸ್ತೆಯಲ್ಲಿ ಸಾಗಿಬ೦ದ ಬಾಲ ಭ೦ಡಾದರ ಮೆರವಣಿಗೆಯು ಸರ್ವಿಸ್ ಬಸ್ ನಿಲ್ದಾಣಮಾರ್ಗವಾಗಿ ಸಿಟಿಬಸ್ ನಿಲ್ದಾಣಮಾರ್ಗವಾಗಿ ಸಾಗಿ ಮಠದಬೆಟ್ಟುವರೆಗೆ ಸಾಗಿಬ೦ದು ನೇಮೋತ್ಸವದ ಚಪ್ಪರಕ್ಕೆ ತಲುಪಿತು.

ಕೀಲುಕುದುರೆ, ಮಕ್ಕಳ ಭಜನಾ ತ೦ಡ, ಮಹಿಳಾ ಚೆ೦ಡೆ ಬಳಗ ಹಾಗೂ ಆಕರ್ಷಕವೇಷ ಭೂಷಣಗಳು ಈ ಮೆರವಣಿಯ ಮೆರಗನ್ನು ಹೆಚ್ಚಿಸಿತ್ತು.

ಕ್ಷೇತ್ರದ ಅಧ್ಯಕ್ಷರು, ಕಾರ್ಯದರ್ಶಿಗಳು ಸಮಿತಿಯ ಸರ್ವ ಸದಸ್ಯರು, ಗ್ರಾಮಸ್ಥರು, ಕೂಡುಕಟ್ಟಿನ ಸದಸ್ಯರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment