BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಲಂಕಾ ವಿರುದ್ಧ 2ನೇ ಟಿ-20: ಇಶಾನ್ ಕಿಶಾನ್ ತಲೆಗೆ ಪೆಟ್ಟು, ಆಸ್ಪತ್ರೆಗೆ ದಾಖಲು

ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಆರಂಭಿಕ ಆಟಗಾರ ಇಶಾನ್ ಕಿಶಾನ್ ಅವರ ತಲೆಗೆ ಪೆಟ್ಟು ಬಿದ್ದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬ್ರೈನ್ ಸ್ಕ್ಯಾನ್  ಮಾಡಲಾಗಿದೆ.

ಭಾರತ ಚೇಸಿಂಗ್ ವೇಳೆಯಲ್ಲಿ ನಾಲ್ಕನೇ ಓವರ್ ನಲ್ಲಿ  ಶ್ರೀಲಂಕಾದ  ಲಹಿರು ಕುಮಾರ ಎಸೆದ ಬೌನ್ಸರ್ ಇಶಾನ್ ತಲೆಗೆ ಬಲವಾಗಿ ಬಡಿದಿದೆ. ಪೆಟ್ಟಿನಿಂದ ಇಶಾನ್ ಕೆಲ ಹೊತ್ತು ನರಳಾಡಿದ್ದಾರೆ. ಕೂಡಲೇ ಭಾರತದ ವೈದ್ಯಕೀಯ ತಂಡ ಮೈದಾನಕ್ಕೆ ಆಗಮಿಸಿ ತಪಾಸಣೆ ನಡೆಸಿದ ಬಳಿಕ ಕಿಶನ್ ಸುಧಾರಿಸಿಕೊಂಡು ಮತ್ತೆ ಬ್ಯಾಟಿಂಗ್ ಗೆ ಇಳಿದರು.

ಪಂದ್ಯ ಮುಗಿದ ಬಳಿಕ ಇಶಾನ್ ಕಿಶಾನ್ ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬ್ರೈನ್ ಸ್ಕ್ಯಾನ್ ಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ಭಾನುವಾರ ತಿಳಿಸಿವೆ.

ಮುಂಜಾಗ್ರತಾ ಕ್ರಮವಾಗಿ ಇಶಾನ್ ಕಿಶಾನ್ ಇಡೀ ರಾತ್ರಿ ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ಬಿಸಿಸಿಐ ಸ್ಕ್ಯಾನ್ ವರದಿಗಾಗಿ ಕಾಯುತ್ತಿದೆ. ಇಂದು ನಡೆಯಲಿರುವ ಅಂತಿಮ ಪಂದ್ಯದಿಂದ ಇಶಾನ್ ಕಿಶಾನ್ ಒಂದು ವೇಳೆ ಹೊರಗುಳಿದರೆ ಮಾಯಾಂಕ್ ಅಗರ್ ವಾಲ್ ಅಥವಾ ವೆಂಕಟೇಶ್ ಅಯ್ಯರ್, ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

No Comments

Leave A Comment