Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ನಾಗರೀಕರ ಮೇಲೂ ರಷ್ಯನ್ ಸೈನಿಕರ ರಾಕ್ಷಸೀ ಕೃತ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿದ ಯುದ್ಧ ಟ್ಯಾಂಕರ್

ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಉಕ್ರೇನ್ ನೆಲದಲ್ಲಿ ಪೈಶಾಚಿಕತೆ ಮೆರೆಯುತ್ತಿದ್ದು, ಒಂದೆಡೆ ಉಕ್ರೇನ್ ಸೈನಿಕರ ಮಾರಣ ಹೋಮ ನಡೆಸುತ್ತಿರುವ ರಷ್ಯಾ ಸೇನೆ ಮತ್ತೊಂದೆಡೆ ಉಕ್ರೇನ್ ನಾಗರೀಕರನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.

ಉಕ್ರೇನ್ ಮೇಲೆ ಯುದ್ಧ ಸಾರುವ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ನಾಗರೀಕರ ಮೇಲೆ ದಾಳಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ರಷ್ಯನ್ ಸೇನೆ ನಡೆದುಕೊಳ್ಳುತ್ತಿದ್ದು, ಉಕ್ರೇನ್ ನಾಗರೀಕರನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.

ರಷ್ಯಾ ವಾಯುದಾಳಿಯಲ್ಲಿ ಈಗಾಗಲೇ ಉಕ್ರೇನ್ ಪ್ರಮುಖ ನಗರಗಳಲ್ಲಿನ ಅಪಾರ್ಟ್ ಮೆಂಟ್ ಗಳು ಹಾನಿಗೊಳಗಾಗಿದ್ದು, ಇಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಯುದ್ಧ ಆರಂಭವಾದ ಎರಡೇ ದಿನದಲ್ಲಿ ಹತ್ತಾರು ನಾಗರೀಕರು ಸಾವನ್ನಪ್ಪಿದ್ದಾರೆ. ನಿನ್ನೆ ರಷ್ಯನ್ ಕ್ಷಿಪಣಿ ದಾಳಿಗೆ ಸೈಕಲ್ ಸವಾರ ಸಾವನ್ನಪ್ಪಿದ್ದ. ಸೈಕಲ್ ನಲ್ಲಿ ತೆರಳುತ್ತಿದ್ದಾಗ ರಷ್ಯಾ ಸಿಡಿಸಿದ್ದ ಕ್ಷಿಪಣಿ ನೇರವಾಗಿ ಆತನಿಗೇ ಬಂದು ಅಪ್ಪಳಿಸಿತ್ತು. ಆತ ಸ್ಥಳದಲ್ಲೇ ಭೀಕರವಾಗಿ ಛಿದ್ರವಾಗಿ ಸಾವನ್ನಪ್ಪಿದ್ದ.

ಈ ಘಟನೆ ಮಾಸುವ ಮುನ್ನವೇ ಅಂತಹುದೇ ಒಂದು ಪೈಶಾಚಿಕತೆ ರಷ್ಯಾ ಸೇನೆಯಿಂದ ನಡೆದಿದೆ. ಹೌದು.. ಉಕ್ರೇನ್ ರಾಜಧಾನಿ ಕೀವ್ ಗೆ ನುಗ್ಗಿರುವ ರಷ್ಯಾ ಸೇನೆ ಅಲ್ಲಿ ನಾಗರೀಕರ ಮೇಲೂ ದಾಳಿ ಮಾಡುತ್ತಿದೆ. ಕೀವ್ ನಗರದ ರಸ್ತೆಯಲ್ಲಿ ಹಿರಿಯ ನಾಗರೀಕರೊಬ್ಬರು ಚಲಾಯಿಸುತ್ತಿದ್ದ ಕಾರಿನ ಮೇಲೆ ರಷ್ಯನ್ ಯುದ್ಧ ಟ್ಯಾಂಕರ್ ಹತ್ತಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ಟ್ಯಾಂಕರ್ ಹತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ಅಂತೆಯೇ ಕಾರಿನೊಳಗೆ ಸಿಲುಕಿದ್ದ ವೃದ್ದ ವ್ಯಕ್ತಿಯನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಡುತ್ತಿರುವ ವಿಡಿಯೋ ಕೂಡ ಹರಿದಾಡುತ್ತಿದೆ. ಅದೃಷ್ಟವಶಾತ್ ಕಾರಿನೊಳಗಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗಳಾಗಿವೆ.

No Comments

Leave A Comment