BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಉಕ್ರೇನ್ ತಿರುಗೇಟು: 800 ರಷ್ಯಾ ಸೈನಿಕರು ಹತ; 7 ವಿಮಾನ, 6 ಚಾಪರ್, 30 ಟ್ಯಾಂಕರ್ ಧ್ವಂಸ!

ಕೀವ್: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆ ಖಡಕ್ ತಿರುಗೇಟು ನೀಡುತ್ತಿರುವ ಉಕ್ರೇನ್ ಸೈನಿಕರು ಮೊದಲ ದಿನವೇ ಭಾರಿ ಪ್ರಮಾಣದ ವಿಧ್ವಂಸ ಮಾಡಿದ್ದು, 800 ರಷ್ಯನ್ ಸೈನಿಕರನ್ನು ಹೊಡೆದುರುಳಿಸಿದೆ.

ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಮುಂದುವರೆದಿರುವಂತೆಯೇ ಇದಕ್ಕೆ ತನ್ನದ ಆದ ರೀತಿಯಲ್ಲಿ ತಿರುಗೇಟು ನೀಡುತ್ತಿರುವ ಉಕ್ರೇನ್ ಭದ್ರತಾ ಪಡೆಗಳು ಮೊದಲ ದಿನವೇ 800 ರಷ್ಯನ್ ಸೈನಿಕರನ್ನು ಹೊಡೆದುರುಳಿಸಿದ್ದು ಮಾತ್ರವಲ್ಲದೇ ರಷ್ಯಾ ಸೇನೆಗೆ ಸೇರಿದ 7 ಯುದ್ಧ ವಿಮಾನಗಳು,  6 ಸೇನಾ ಕಾಪ್ಟರ್ ಗಳು, 30 ಯುದ್ಧ ಟ್ಯಾಂಕರ್ ಗಳನ್ನು ಧ್ವಂಸ ಮಾಡಿವೆ.

ಈ ಬಗ್ಗೆ ಸ್ವತಃ ಉಕ್ರೇನಿಯನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ಗುರುವಾರದಿಂದ ಸೇನಾ ಕಾರ್ಯಾಚರಣೆಗಳು ಆರಂಭವಾದಾಗಿನಿಂದ ತನ್ನ ಸಶಸ್ತ್ರ ಪಡೆಗಳು ರಷ್ಯಾದ ಪಡೆಗಳ ಮೇಲೆ ಸುಮಾರು 800 ಸಾವು-ನೋವುಗಳನ್ನು ಉಂಟುಮಾಡಿವೆ ಎಂದು ಹೇಳಿದೆ.

ಅಲ್ಲದೆ ರಷ್ಯಾದ ಏಳು ಯುದ್ಧ ವಿಮಾನಗಳು ಮತ್ತು ಆರು ಹೆಲಿಕಾಪ್ಟರ್‌ಗಳೊಂದಿಗೆ 30 ಕ್ಕೂ ಹೆಚ್ಚು ರಷ್ಯಾದ ಟ್ಯಾಂಕ್‌ಗಳನ್ನು ನಾಶಪಡಿಸಲಾಗಿದೆ. ಇದಲ್ಲದೇ ರಷ್ಯಾ ಸೇನೆಗೆ ಸೇರಿದ್ದ 130 ಮೊಬೈಲ್ ಮಿಸೈಲ್ ಲಾಂಚರ್ ಗಳನ್ನು ಉಕ್ರೇನ್ ಸೇನೆ ನಾಶ ಮಾಡಿದೆ ಎಂದು ಉಕ್ರೇನ್‌ನ ರಕ್ಷಣಾ ಉಪ ಮಂತ್ರಿ ಹನ್ನಾ ಮಲ್ಯಾರ್ ತಿಳಿಸಿದ್ದಾರೆ.

No Comments

Leave A Comment